ರಾಷ್ಟ್ರ ಸುದ್ದಿ

ಸೋನಿಯಾ ಗಾಂಧಿ ಆಪ್ತ ಮಾಜಿ ವಕ್ತಾರ ಟಾಮ್ ವಡಕ್ಕನ್ ಬಿಜೆಪಿಗೆ ಸೇರ್ಪಡೆ

ತಿರುವನಂತಪುರಂ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಎಐಸಿಸಿ ಮಾಜಿ ವಕ್ತಾರ ಟಾಮ್ ವಡಕ್ಕನ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವಡಕ್ಕನ್  ಅವರನ್ನು ಕೇಸರಿ ಪಕ್ಷಕ್ಕೆ ಬರಮಾಡಿಕೊಂಡರು. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ವಡಕ್ಕನ್ ಬಿಜೆಪಿ ಸದಸ್ಯರಾಗಿ ಸೇರಿದ್ದಾರೆ. ಪುಲ್ವಾಮಾ ದಾಳಿಯ ನಂತರ ಕಾಂಗ್ರೆಸ್ ಸಶಸ್ತ್ರ ಪಡೆಗಳ ವೈಫಲ್ಯ ಹಾಗೂ ಬಾಲ್ ಕೋಟ್ ದಾಳಿಯ ಸಾಕ್ಷಗಳನ್ನು ಪ್ರಶ್ನಿಸಿದ್ದರಿಂದ ವಡಕ್ಕನ್ ತೀವ್ರ ಅಸಮಾಧಾನಗೊಂಡಿದ್ದರು. ತ್ರಿಶೂರ್ ಲೋಕಸಭೆ ಕ್ಷೇತ್ರದಿಂದ ವಡಕ್ಕನ್ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಊಹೆಗಳಿದೆ. ವಡಕ್ಕನ್ ಬಿಜೆಪಿ ಅಭಿವೃದ್ಧಿಯ ರಾಜಕೀಯದಿಂದ ಸ್ಫೂರ್ತಿ ಪಡೆದಿದ್ದಾನೆ ಎಂದು ರವಿಶಂಕರ್ ಪ್ರಸಾದ್ ಮಾದ್ಯಮಗಳಿಗೆ ವಿವರಿಸಿದ್ದಾರೆ, ಲೋಕಾಸಭೆ ಚುನಾವಣೆಗೆ ಮುನ್ನ ಕೇರಳ ರಾಜ್ಯದ ಇಬ್ಬರು ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರಿರುವುದು ಕಡಲ ತಡಿಯ ರಾಜ್ಯದಲ್ಲಿನ ಕೈ ಪಾಳಯಕ್ಕೆ ಅತೀವ ಆಘಾತಕಾರಿಯಾಗಿದೆ.

About the author

ಕನ್ನಡ ಟುಡೆ

Leave a Comment