ರಾಷ್ಟ್ರ ಸುದ್ದಿ

ಸೋನಿಯಾ, ರಾಹುಲ್‌ ಐಟಿ ಕೇಸು: ಮೋದಿ ಹೇಳಿಕೆಗೆ ಚಿದಂಬರಂ ಖಂಡನೆ

ಹೊಸದಿಲ್ಲಿ : ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ವಿರುದ್ಧದ ಆದಾಯ ತೆರಿಗೆ ಕೇಸನ್ನು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿನಲ್ಲಿ ಜಯಿಸಿದೆ ಎಂದು ತಪ್ಪಾಗಿ ಹೇಳಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿರಿಯ ಕಾಂಗ್ರೆಸ್‌ ನಾಯಕ, ಮಾಜಿ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ ತೀವ್ರವಾಗಿ ಖಂಡಿಸಿದ್ದಾರೆ.

ಇನ್‌ಕಂ ಟ್ಯಾಕ್ಸ್‌ ಕೇಸಿನಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದಿರುವ ವಿಚಾರಣೆಯ ಕಲಾಪವನ್ನು ಪ್ರಧಾನಿಗೆ ಈ ರೀತಿಯಾಗಿ ಯಾರೇ ಮಾಹಿತಿ ಕೊಟ್ಟಿದ್ದರೂ ಅವರನ್ನು ಕಿತ್ತು ಬಿಸಾಕಬೇಕು ಎಂದು ಚಿದಂಬರಂ ಹೇಳಿದರು. ಸುಪ್ರೀಂ ಕೋರ್ಟ್‌ ನಿನ್ನೆ ಸೋನಿಯಾ ಮತ್ತು ರಾಹುಲ್‌ ಗಾಂಧಿ ವಿರುದ್ಧದ ಆದಾಯ ತೆರಿಗೆ ಕೇಸನ್ನು ಪುನರಪಿ ತೆರೆಯಲು ಅನುಮತಿ ನೀಡಿ ಆದೇಶ ಹೊರಡಿಸಿತ್ತು.

 

About the author

ಕನ್ನಡ ಟುಡೆ

Leave a Comment