ರಾಷ್ಟ್ರ ಸುದ್ದಿ

ಸೋಹ್ರಾಬುದ್ದೀನ್ ಎನ್ ಕೌಂಟರ್ ಆಗದೇ ಇದ್ದಿದ್ದರೆ ಪಾಕ್ ಮೋದಿ ಹತ್ಯೆ ಮಾಡುತ್ತಿತ್ತು: ಡಿಜಿ ವಂಜಾರ

ಗಾಂಧಿನಗರ: ಗುಜರಾತ್ ನ ನಿವೃತ್ತ ಐಪಿಎಸ್ ಅಧಿಕಾರಿ ಡಿಜಿ ವಂಜಾರ ಸ್ಫೋಟಕ ಹೇಳಿಕೆ ನೀಡಿದ್ದು, ಸೋಹ್ರಾಬುದ್ದೀನ್ ಎನ್ ಕೌಂಟರ್ ಆಗದೇ ಇದ್ದಿದ್ದರೆ ಪಾಕಿಸ್ತಾನ ಅಂದಿನ ಗುಜರಾತ್ ಮುಖ್ಯಮಂತ್ರಿ, ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಿರುತ್ತಿತ್ತು ಎಂದು ಹೇಳಿದ್ದಾರೆ.
ಗುಜರಾತ್ ಪೊಲೀಸರು ಸೋಹ್ರಾಬುದ್ದೀನ್ ನ್ನು ಎನ್ ಕೌಂಟರ್ ಮಾಡದೇ ಇದ್ದಲ್ಲಿ ಗುಜರಾತ್ ನ್ನು ಮತ್ತೊಂದು ಕಾಶ್ಮೀರವನ್ನಾಗಿ ಮಾಡುವುದಕ್ಕೆ ಪಾಕಿಸ್ತಾನ ಸಂಚು ರೂಪಿಸಿ ಮೋದಿ ಅವರನ್ನು ಹತ್ಯೆ ಮಾಡಲು ಹವಣಿಸುತ್ತಿತ್ತು ಎಂದು ಡಿಜಿ ವಂಜಾರ ಹೇಳಿದ್ದು ಕೇಂದ್ರದಲ್ಲಿದ್ದ ಯುಪಿಎ-ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರಗಳ ರಾಜಕೀಯ ಯುದ್ಧದಲ್ಲಿ  ಗುಜರಾತ್, ರಾಜಸ್ಥಾನ ಹಾಗೂ ಆಂಧ್ರ ಪ್ರದೇಶದ ಪೊಲೀಸ್ ಅಧಿಕಾರಿಗಳನ್ನು ಬಲಿಪಶುಗಳನ್ನಾಗಿ ಮಾಡಲಯಿತು ಎಂದು ಹೇಳಿದ್ದಾರೆ. ಸೋಹ್ರಾಬುದ್ದಿನ್ ತುಳಸಿರಾಮ್ ಪ್ರಜಾಪತಿ ಪ್ರಕರಣದಲ್ಲಿ ಸಿಬಿಐ ಕೋರ್ಟ್ ತೀರ್ಪು ಪ್ರಕಟಿಸಿದ ಬಳಿಕ ಡಿಜಿ ವಂಜಾರ ಈ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಎನ್ ಕೌಂಟರ್ ನಡೆಯದೇ ಇದ್ದಿದ್ದರೆ ಮೋದಿ ಅವರನ್ನು ಹತ್ಯೆ ಮಾಡಿ ಗುಜರಾತ್ ನ್ನು ಮತ್ತೊಂದು ಕಾಶ್ಮೀರವನ್ನಾಗಿಸಲು ಪಾಕಿಸ್ತಾನ ಯೋಜನೆ ರೂಪಿಸಿತ್ತು ಎಂದು ವಂಜಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸೋಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಡಿಜಿ ವಂಜಾರ ಅವರನ್ನೂ ಸಹ ವಿಚಾರಣೆಗೊಳಪಡಿಸಲಾಗಿತ್ತು.

About the author

ಕನ್ನಡ ಟುಡೆ

Leave a Comment