ರಾಷ್ಟ್ರ

ಸ್ತ್ರೀಯರ ರಕ್ಷಣೆಗೆ ಕುಟುಂಬದ ಅತ್ತೆಯಂದಿರು ಮುಂದಾಗಬೇಕು ಪ್ರಧಾನಿ ಮೋದಿ ಆಶಯ

ರಾಜಸ್ಥಾನ: ರಾಜಸ್ಥಾನದ  ರಾಷ್ಟ್ರೀಯ ಪೋಷಕಾಂಶ ಯೋಜನೆ ಮತ್ತು “ಬೇಟಿ ಬಚಾವೊ ಬೇಟಿ ಪಢಾವೊ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತ್ತನಾಡಿದ್ದ ಅವರು” ಹೆಣ್ಣು ಮಕ್ಕಳು ಹೊರೆಯಲ್ಲಾ ಬದಲಾಗಿ ಇಡೀ ಕುಟುಂಬದ ಹೆಮ್ಮೆ ಮತ್ತು ಸಂಪತ್ತು. ಹೆಣ್ಣು ಮಕ್ಕಳ ವಿಷಯದಲ್ಲಿ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ” ಎಂದು ನರೇಂದ್ರ ಮೋದಿ ಹೇಳಿಕೆಯನ್ನು ನೀಡಿದ್ದಾರೆ.

ಪ್ರತಿಯೊಬ್ಬರೂ ಸಮಾನರೆ ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಅಗತ್ಯ,ಹೆಣ್ಣು ಮಕ್ಕಳು ದೇಶಕ್ಕೆ ಹೆಮ್ಮೆ ಮತ್ತು ಗೌರವ ತರುತ್ತಿದ್ದಾರೆ. ಅದನ್ನು ಒಮ್ಮೆ ಗಮನಿಸಿ ನೋಡಿ ಎಂದರು.

ಹೆಣ್ಣು ಭ್ರೂಣಹತ್ಯೆ ಅತ್ಯಂತ ಅಪಮಾನಕರ ಎಂದು ಬಣ್ಣಿಸಿದ ಮೋದಿಯವರು ಹೆಣ್ಣು ಮಕ್ಕಳ ರಕ್ಷಣೆಯ ನೇತೃತ್ವವನ್ನು  ಅತ್ತೆಯಂದಿರು ವಹಿಸಬೇಕು ಎಂದರು.ಹೆಣ್ಣು ಮಕ್ಕಳು ನಿರ್ಲಕ್ಷ್ಯ ಮತ್ತು ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವುದನ್ನು ಯುವಜನಾಂಗ ನಿಲ್ಲಿಸಬೇಕು ಅತ್ತೆಯಂದಿರು ತಮ್ಮ ಕುಟುಂಬದ ಹೆಣ್ಣುಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದ್ದಾರೆ. ಜತೆಗೆ ಸರ್ಕಾರವು ಈ ವಿಷಯದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು ಎಂದು ಹೇಳಿದ್ದಾರೆ.

 

About the author

ಕನ್ನಡ ಟುಡೆ

Leave a Comment