ದೇಶ ವಿದೇಶ

ಸ್ಮಗ್ಲಿಂಗ್‌ ಆರೋಪ: ಬ್ರಿಸ್ಬೇನ್‌ ಏರ್‌ಪೋರ್ಟ್‌ನಲ್ಲಿ 9 ಭಾರತೀಯರ ಸೆರೆ

ಬ್ರಿಸ್ಬೇನ್‌ : ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  9 ಮಂದಿ ಭಾರತೀಯರನ್ನು ಸ್ಮಗ್ಲಿಂಗ್‌ ಆರೋಪದಲ್ಲಿ ಆಸ್ಟ್ರೇಲಿಯಾ ಬಾರ್ಡರ್‌ ಫೋರ್ಸ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಥಾಯ್‌ಲ್ಯಾಂಡ್‌ನಿಂದ ತೆರಳಿದ್ದ ವಿಮಾನಿಂದ ಇಳಿಯುತ್ತಿದ್ದಂತೆ 9 ಮಂದಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿರುವುದಾಗಿ ಎಬಿಎಫ್ ಮೂಲಗಳು ತಿಳಿಸಿವೆ.

ಸ್ಮಗ್ಲಿಂಗ್‌ ಆರೋಪದ ಹಿನ್ನಲೆಯಲ್ಲಿ ವಶಕ್ಕೆ ಪಡೆಯಲಾಗಿರುವ 9 ಮಂದಿಯನ್ನು ಎಬಿಎಸ್‌ ತೀವ್ರವಾಗಿ ವಿಚಾರಣೆ ನಡೆಸುತ್ತಿದೆ. ಕಾಮನ್‌ವೆಲ್ತ್‌ ಗೇಮ್ಸ್‌ ಹಿನ್ನಲೆಯಲ್ಲಿ ಆಸ್ಟೇಲಿಯಾಕ್ಕೆ ಆಗಮಿಸುವ ವಿದೇಶಿಗರ ಮೇಲೆ ವಿಮಾನ ನಿಲ್ದಾಣದಲ್ಲಿ ವಿಶೇಷ ನಿಗಾ ಇರಿಸಲಾಗಿದೆ.

ಬಂಧಿತರಲ್ಲಿ ಓರ್ವ ರಾಕೇಶ್‌ ಶರ್ಮಾ ಎಂದು ತಿಳಿದು ಬಂದಿದ್ದು, ನಕಲಿ ದಾಖಲೆಗಳು ವೀಸಾದಲ್ಲಿ ಗೊಂದಲಗಳು ಕಂಡು ಬಂದಿರುವುದಾಗಿ ಆಸೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

 

About the author

ಕನ್ನಡ ಟುಡೆ

Leave a Comment