ಕ್ರೀಡೆ

ಸ್ಮಿತ್​ , ವಾರ್ನರ್​ ಪರ ಬ್ಯಾಟ್​ ಬೀಸಿದ ಗಂಭೀರ್​, ರೋಹಿತ್​

ನವದೆಹಲಿ: ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಒಂದು ವರ್ಷ ನಿಷೇಧಕ್ಕೆ ಒಳಗಾಗಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್​ ಸ್ಮಿತ್​ ಹಾಗೂ ಮಾಜಿ ಉಪನಾಯಕ ಡೇವಿಡ್​ ವಾರ್ನರ್​ ಪರ ಭಾರತದ ತಂಡದ ಗೌತಮ್​ ಗಂಭೀರ್ ಹಾಗೂ ರೋಹಿತ್​ ಶರ್ಮಾ ಬ್ಯಾಟ್​ ಬೀಸಿದ್ದಾರೆ.

ತಮ್ಮ ಟ್ವಿಟರ್​ ಖಾತೆಯಲ್ಲಿ ಸರಣಿ ಟ್ವೀಟ್​ ಮಾಡಿರುವ ಗೌತಮ್‌ ಗಂಭೀರ್‌ ಆಸ್ಟ್ರೇಲಿಯಾ ಕ್ಯಾಪ್ಟನ್‌ ಸ್ಮಿತ್‌ ಹಾಗೂ ಉಳಿದ ಇಬ್ಬರು ಆಟಗಾರರಿಗೆ ಕ್ರಿಕೆಟ್‌‌ ಆಸ್ಟ್ರೇಲಿಯಾ ನಿಷೇಧ ಹೇರಿರುವುದು ಸರಿಯಲ್ಲ. ಈ ಹಿಂದೆ ಕ್ರಿಕೆಟ್‌‌ ಆಟಗಾರರ ಸಂಬಳ ಹೆಚ್ಚಿಸುವಂತೆ ಕೇಳಿಕೊಂಡಾಗ ಸ್ಮಿತ್‌ ಹಾಗೂ ವಾರ್ನರ್‌‌ ಅವರನ್ನ ದಂಗೆಕೋರರ ರೀತಿಯಲ್ಲಿ ನೋಡಲಾಗಿತ್ತು ಎಂದಿದ್ದಾರೆ.

ಎರಡನೇ ಟ್ವೀಟ್​ನಲ್ಲಿ ಸ್ಮಿತ್​ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಮಾಧ್ಯಮಗಳು ಸ್ಮಿತ್​ ಮತ್ತು ಕುಟುಂಬವನ್ನು ಟಾರ್ಗೆಟ್​ ಮಾಡುತ್ತಿರುವುದು ಹಾಗೂ ನಿನ್ನೆ ಜೋಹಾನ್ಸ್​ಬರ್ಗ್​ ವಿಮಾನ ನಿಲ್ದಾಣದಲ್ಲಿ ಚೀಟ್​ ಎಂದು ಕರೆದಿರುವುದೇ ನಿಷೇಧಕ್ಕಿಂತ ದೊಡ್ಡ ಶಿಕ್ಷೆಯಾಗಿದೆ ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ. ಶ್ರೇಷ್ಠ ಆಟಗಾರರನ್ನ ಕೇವಲ ಒಂದು ತಪ್ಪಿನಿಂದ ಅಳೆಯಬಾರದು. ಶ್ರೇಷ್ಠ ಆಟಗಾರರನ್ನು ಈ ರೀತಿ ನಡೆಸಿಕೊಳ್ಳಬಾರದು. ಸಿಡ್ನಿಯ ಪತ್ರಿಕಾಗೋಷ್ಠಿಯಲ್ಲಿ ಆಟಗಾರರು ತಮ್ಮ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. ತಾವು ಮಾಡಿದ ಕೃತ್ಯವನ್ನು ಸಹ ಒಪ್ಪಿಕೊಂಡಿದ್ದು ಚೆಂಡು ವಿರೂಪ ಪ್ರಕರಣವನ್ನು ಮುಂದಿಟ್ಟುಕೊಂಡು ಅವರನ್ನು ಅಮಾನತು ಮಾಡಬಾರದು. ಆಟಗಾರರ ಮೇಲೆ ಕ್ರಿಕೆಟ್ ಆಸ್ಟ್ರೇಲಿಯಾ ನಿಷೇಧ ಹೇರಿರುವುದು ಸರಿಯಲ್ಲ ಎಂದು ಟ್ವೀಟ್​ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment