ಸಿನಿ ಸಮಾಚಾರ

ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್​ಗೆ ನಾಳೆ ಸೀಮಂತ ಸಂಭ್ರಮ

ಬೆಂಗಳೂರು: ಒಂಬತ್ತು ತಿಂಗಳು ತುಂಬು ಗರ್ಭಿಣಿಯಾಗಿರುವ ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್​ ಸೀಮಂತ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ನಡೆದಿದೆ. ಗೌಡರ ಸಂಪ್ರದಾಯದಂತೆ‌ ಸೀಮಂತ ಶಾಸ್ತ್ರ ನಡೆಯಲಿದ್ದು, ಸೀಮಂತದ ಸಂಭ್ರಮದಲ್ಲಿ ಸಿನಿಮಾರಂಗದ ಕಲಾವಿದರು ಹಾಗೂ ಸಂಬಂಧಿಕರು ಭಾಗಿಯಾಗಲಿದ್ದಾರೆ.

ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ನಾಳೆ ನಡೆಯಲಿರುವ ಸೀಮಂತ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ನಡೆದಿದ್ದು, ಆತ್ಮೀಯರಿಗೆ, ಸ್ನೇಹಿತರಿಗಷ್ಟೇ ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ.

About the author

ಕನ್ನಡ ಟುಡೆ

Leave a Comment