ಸಿನಿ ಸಮಾಚಾರ

ಸ್ಯಾಂಡಲ್‍ವುಡ್ ನಟಿಯರಿಗೆ ಪೈಪೋಟಿ ನೀಡಲು ಬಂದ ಸಂಜನಾ ದಾಸ್

ನಟಿಯಾಗಬೇಕೆಂಬ ಆಸೆ ಹೊತ್ತು ಹಲವಾರು ನಟಿಯರು ಸ್ಯಾಂಡಲ್ವುಡ್ ಗೆ ಬರುತ್ತಾರೆ. ಅದೇ ರೀತಿ ಇದೀಗ ಬೆಂಗಳೂರಿನ ಚೆಲುವೆ ಸಂಜನಾ ದಾಸ್ ಸಹ ಎಂಟ್ರಿ ಕೊಟ್ಟಿದ್ದಾರೆ. ರತ್ನಂ ನಿರ್ದೇಶನದ ಚಿತ್ರದ ಮೂಲಕ ಸಂಜನಾ ದಾಸ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಮನಸ್ಮಿತ ಎಂದು ಶೀರ್ಷಿಕೆ ಇಡಲಾಗಿದೆ. ಚಿತ್ರದಲ್ಲಿ ಚರಣ್ ಗೌಡ, ಅತುಲ್ ಕುಲಕರ್ಣಿ, ಭವಾನಿ ಪ್ರಕಾಶ್ ಮತ್ತು ವೀಣಾ ಪೊನ್ನಪ್ಪ ಅಭಿನಯಿಸುತ್ತಿದ್ದಾರೆ. ಏಪ್ರಿಲ್ ನಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ಸಂಜನಾ ದಾಸ್ ಭಾಗಿಯಾಗುತ್ತಿದ್ದಾರೆ. ಈ ಕುರಿತು ಮಾತನಾಡಿದ ಸಂಜನಾ ಅವರು, ನಾನು ಚಿಕ್ಕ ಹುಡುಗಿಯಾಗಿದ್ದಾಗಿಂದಲೂ ನಟಿಯಾಗಬೇಕೆಂಬ ಆಸೆ ಇಟ್ಟುಕೊಂಡಿದ್ದೆ. ನನ್ನ ಪೋಷಕರನ್ನು ಒಪ್ಪಿಸುವುದಕ್ಕೆ ಸ್ವಲ್ಪ ಸಮಯ ಹಿಡಿಯಿತು ಎಂದರು.

About the author

ಕನ್ನಡ ಟುಡೆ

Leave a Comment