ಸಿನಿ ಸಮಾಚಾರ

ಸ್ವಚ್ಛ ಭಾರತ್ ಅಭಿಯಾನಕ್ಕೆ ಬಾಲ ಕಲಾವಿದೆ ಮುಂದಾಗಿದ್ದಾರೆ

ಬೆಂಗಳೂರು: ಕನ್ನಡ ಸಿನಿಮಾ ಸಂದಾಸ್ ಮಕ್ಕಳ ಸಿನಿಮಾದಲ್ಲಿ ನಟಿಸಿರುವ 14 ವರ್ಷದ ಬಾಲ ಕಲಾವಿದೆ ಪ್ರತ್ಯಕ್ಷ ರಾಮಕೃಷ್ಣ ಚಿಕ್ಕ ವಯಸ್ಸಿನಲ್ಲಿಯೇ ಸಾಮಾಜಿಕ ಜವಾಬ್ದಾರಿಗಳನ್ನು ತೋರಿಸುತ್ತಾರೆ. ಈ ಚಿತ್ರದ ನಿರ್ದೇಶಕ ಅಜಯ್ ಕುಮಾರ್ ಎ.ಜೆ. ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಪ್ರತ್ಯಕ್ಷ ಚಿತ್ರಕ್ಕಾಗಿ ತಯಾರಿ ನಡೆಸಲು ದಾನಾಪುರ ಎಂಬ ಗ್ರಾಮಕ್ಕೆ ಎರಡು ತಿಂಗಳು ಹೋಗಿ ತಯಾರಿ ನಡೆಸುತ್ತಿದ್ದರು.

ಈ ಚಿತ್ರದಲ್ಲಿ ಮಲ್ಲಮ್ಮ ಎಂಬ ಹುಡುಗಿ ತನ್ನ ಗ್ರಾಮದಲ್ಲಿ ಶೌಚಾಲಯವಿಲ್ಲವೆಂದು ಸತತ ಮೂರು ದಿನಗಳ ಕಾಲ ಊಟ ತಿಂಡಿಯಿಲ್ಲದೆ ಹೋರಾಟ ನಡೆಸುವ ಕಥೆ ಹೊಂದಿದೆ. ಪ್ರತ್ಯಕ್ಷ ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸಿದ್ದಾಳೆ. ಚಿತ್ರದ ಶೂಟಿಂಗ್ ಮಾಡಬೇಕಾದರೆ ಗ್ರಾಮದಲ್ಲಿನ ಅನೇಕ ಮಂದಿ ಬಯಲಿನಲ್ಲಿ ಶೌಚ ಮಾಡುತ್ತಿದ್ದುದನ್ನು ಪ್ರತ್ಯಕ್ಷ ಗಮನಿಸಿದ್ದಾಳೆ.

ತುಮಕೂರು ಜಿಲ್ಲೆಯ ಜಾಲಡಿಗೆರೆ ಗ್ರಾಮದಿಂದ ಕೃಷಿ ಕುಟುಂಬದಿಂದ ಬಂದಿರುವ ಪ್ರತ್ಯಕ್ಷ ಸಿನಿಮಾದಲ್ಲಿ ಸಂಪಾದಿಸುವ ಸ್ವಲ್ಪ ಹಣವನ್ನು ತಮ್ಮ ಗ್ರಾಮದ ಜನರ ಉಪಯೋಗಕ್ಕೆ ವಿನಿಯೋಗಿಸಲು ಮುಂದಾಗಿದ್ದಾಳೆ. ಚಿತ್ರದ ನಿರ್ಮಾಪಕರ ಬಳಿ ಮಾತನಾಡಿ 1 ಲಕ್ಷ ರೂಪಾಯಿಗಳನ್ನು ಗ್ರಾಮದ ಸ್ವಚ್ಛ ಭಾರತ ಅಭಿಯಾನಕ್ಕೆ ಕಳುಹಿಸಿದ್ದಾರೆ.

 

About the author

ಕನ್ನಡ ಟುಡೆ

Leave a Comment