ರಾಜ್ಯ ಸುದ್ದಿ

ಹಂದಿಜ್ವರದ ಜತೆ ವಾಂತಿ ಬೇಧಿನೂ ಆಗುತ್ತೆ: ಅಮಿತ್ ಶಾ ವಿರುದ್ಧ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರು: ಹಂದಿಜ್ವರದಿಂದ ಬಳಲುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು, ರಾಜ್ಯದ ಸಮ್ಮಿಶ್ರ ಸರ್ಕಾರ ಬೀಳಿಸೋಕೆ ಮುಂದಾದರೆ, ಹಂದಿಜ್ವರದ ಜತೆ ವಾಂತಿ ಬೇಧಿನೂ ಆಗುತ್ತೆ ಅಂತ ವ್ಯಂಗ್ಯವಾಡಿದ್ದಾರೆ.
ಇಂದು ಬಿಜೆಪಿಯ ಆಪರೇಷನ್ ಕಮಲದ ವಿರುದ್ಧ ಮೌರ್ಯ ಸರ್ಕಲ್ ನಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ ಹರಿಪ್ರಸಾದ್ ಅವರು, ಕರ್ನಾಟಕದ ಜನರಿಗೆ ಅಪಮಾನ ಮಾಡಿದರೆ, ಹಂದಿಜ್ವರ ಬರುತ್ತೆ ಎಂದು ಅಮಿತ್ ಷಾ ವಿರುದ್ಧ ವಾಗ್ದಾಳಿ ನಡೆಸಿದರು. ರಾಫೆಲ್ ಹಗರಣದಲ್ಲಿ ಬಿಜೆಪಿಗೆ 30 ಸಾವಿರ ಕೋಟಿ ರುಪಾಯಿ ಬಂದಿದೆ. ಆ ಹಣದ ಮದದಿಂದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಆದರೆ 30 ಸಾವಿರ ಕೋಟಿ ಅಲ್ಲ 1 ಲಕ್ಷ ಕೋಟಿ ತಂದರೂ ಕರ್ನಾಟಕ ಸರ್ಕಾರ ಬೀಳಿಸಲು ಸಾಧ್ಯವಿಲ್ಲ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಅಮಿತ್ ಶಾ ಚಾಣಾಕ್ಷ ಅಲ್ಲ. ಕುತಂತ್ರಿ. ದೇಶಕಂಡ ಅತಿ ದೊಡ್ಡ ಸುಳ್ಳುಗಾರ. ಪಂಚರಾಜ್ಯದ ಸೋಲಿನ ನಂತರ ಬಿಜೆಪಿಯವರು ಹತಾಶರಾಗಿದ್ದಾರೆ. ಇವರ ಕೌಂಟ್ ಡೌನ್ ಈಗ ಶುರುವಾಗಿದೆ. ಸಮಿಶ್ರ ಸರ್ಕಾರ ಭದ್ರವಾಗಿದ್ದು, ಐದು ವರ್ಷ ಪೂರ್ಣಗೊಳಿಸಲಿದೆ. ಬಿಜೆಪಿಯವರಿಗೆ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದರು. ಸದ್ಯ ಎಚ್​​1ಎನ್​1ನಿಂದ ಬಳಲುತ್ತಿರೋ ಅಮಿತ್ ಷಾ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

About the author

ಕನ್ನಡ ಟುಡೆ

Leave a Comment