ರಾಜ್ಯ ಸುದ್ದಿ

ಹಣದಾಸೆಗೆ 20 ದಿನಗಳ ಹಸುಗೂಸನ್ನು ಮಾರಾಟ ಮಾಡಿದ ತಾಯಿ

ಕಲಬುರ್ಗಿ: ಹೆತ್ತ ತಾಯಿಯೇ ತನ್ನ 20ದಿನಗಳ ಕಂದನನ್ನು ಹಣದಾಸೆಗೆ ಇನ್ನೊಬ್ಬ ಮಹಿಳೆಗೆ ಮಾರಾಟ ಮಾಡಿರುವ ಘಟನೆ ಕಲಬುರ್ಗಿಯಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯು ತನ್ನ ಮಗುವನ್ನು  5,000  ರು. ಗೆ ಮಾರಾಟ ಮಾಡಿರುವುದು ಪತ್ತೆಯಾಗಿದ್ದು  ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳುಸಂತ್ರ್ಸ್ಥ ಮಗುವನ್ನು ರಕ್ಷಿಸಿದ್ದಾರೆ. ಮಕ್ಕಳ ಕ್ಷೇಮಾಭಿವೃದ್ದಿ ಸಮಿತಿಯ  ಸದಸ್ಯ ಸೂರ್ಯಕಾಂತ್ ಮಕ್ಕಳ ರಕ್ಷಣೆ ಅಧಿಕಾರಿ ಪ್ರವೀಣ್ ಹೆರೂರ್ ತಾಯಿ ಮತ್ತು ಇನ್ನೊಬ್ಬ ಮಹಿಳೆಯ ವಿರುದ್ಧ ದೂರು ದಾಖಲಿಸಿದ್ದು ಮಹಿಳಾ ಪೋಲೀಸರು ಮಗುವನ್ನು ಮಾರಿದ್ದ ಮಹಿಳೆಯ ಬಂಧನಕ್ಕೆ ಯಶಸ್ವಿಯಾಗಿದ್ದಾರೆ.
ಬಂಧಿತಳನ್ನು ರಜಿಯಾ ಎಂದು ಗುರುತಿಸಲಾಗಿದ್ದು ಈಕೆ ಕಳೆದ 20  ದಿನಗಳ ಹಿಂದಷ್ಟೇ ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಮಗುವಿನ ತೂಕ ಕಡಿಮೆ ಇದ್ದ ಕಾರಣ ತಾಯಿ-ಮಗುವನ್ನು ಕೆಲ ಕಾಲ ಆಸ್ಪತ್ರೆಯಲ್ಲೇ ಇರಿಸಿಕೊಳ್ಳಲಾಗಿತ್ತು. ಈ ಸಮಯ ರಜಿಯಾ ಸಂಬಂಧಿಯಾಗಿದ್ದ  ರೆಹಮತ್ ಉನ್ನಿಸಾ ಎಂಬಾಕೆ ಆಸ್ಪತ್ರೆಗೆ ಆಗಮಿಸಿ ರಜಿಯಾ ಯೋಗಕ್ಷೇಮ ವಿಚಾರೈಸಿದ್ದಾಳೆ. ಆಗ ರಜಿಯಾ  ತನ್ನ ಬಡತನದ ವ್ಯಥೆಯನ್ನು ಅವಳಲ್ಲಿ ತೋಡಿಕೊಂಡಿದ್ದು ತನಗೆ ಮಗುವನ್ನು ಸಾಕಲಾಗುವುದಿಲ್ಲ, ನಾನು ಈ ಮಗುವನ್ನು ಮಾರಲು ನಿರ್ಧರಿಸಿದ್ದೇನೆ. ನೀನೇ ತೆಗೆದುಕೋ ಎಂದಿದ್ದಾಳೆ.
ರಜಿಯಾ ಗೆ ಎರಡು ಹೆಣ್ಣು ಮಕ್ಕಳಿದ್ದು ಇದೀಗ ಮೂರನೇ ಮಗು ಗಂಡಾಗಿತ್ತು. ಅವರಿವರ ಮನೆ ಕೆಲಸ ಮಾಡಿ ಜೀವನ ಸಾಗಿಸುವ ರಜಿಯಾ ಗೆ ಮಕ್ಕಳ ಸಾಕಣೆ ಕಠಿಣವಾಗಿತ್ತು. ಹೀಗಾಗಿ ಆಕೆ ತನ್ನ ಮಗುವನ್ನು ಮಾರಲು ನಿರ್ಧರಿಸಿದ್ದಾಳೆ. ಅದರಂತೆ ಮಗುವನ್ನು ಕೇವಲ 5,000 ರು.ಗೆ ಮಾರಟ ಮಾಡಿದ್ದಾಳೆ.ಇದಾಗಿ ನೆರೆಮನೆಯಾಕೆ ನೀಲಮ್ಮ ರಜಿಯಾ ಮಗು ಬಗ್ಗೆ ವಿಚಾರಿಸಿದಾಗ ಆಕೆ ಮಗು ಮಾರಾಟ ಮ್ಡಿರುವುದು ಗೊತಾಗಿದೆ. ಆಕೆ ಮಕ್ಕಳ ಕಲ್ಯಾಣ ಸಮಿತಿಗೆ ಈ ಸಂಬಂಧ ಮಾಹಿತಿ ನೀಡಿದ್ದಾರೆ ಎಂದು ಪೋಲೀಸರು ಮಾಹಿತಿ ನಿಡಿದರು.

About the author

ಕನ್ನಡ ಟುಡೆ

Leave a Comment