ಆಹಾರ

ಹಣ್ಣುಗಳ ರಾಜ ಮಾವುಗೆ ಉತ್ತಮ ಬೆಲೆ ನಿರೀಕ್ಷೆ

ಬೆಂಗಳೂರು :  ಅಧಿಕ ಮಳೆ , ಆಲಿಕಲ್ಲು ನಡುವೆಯೂ ಈ ಬಾರಿ ಹಣ್ಣುಗಳ ರಾಜ ಮಾವು ಇಳುವರಿ ಚೆನ್ನಾಗಿದ್ದು,  ಉತ್ತಮ ಬೆಲೆ ದೊರೆಯುವ ನಿರೀಕ್ಷೆಯಿದೆ.ಈ ವರ್ಷದ ಮೊದಲಾರ್ಧದಲ್ಲಿ 8. 5 ಲಕ್ಷಟನ್ ಮಾವಿನ ಬದಲಿಗೆ 4 ಲಕ್ಷ ಟನ್ ಮಾವು ಇಳುವರಿ ನಿರೀಕ್ಷೆಯಿದ್ದು, ಹಣ್ಣುಗಳೆಲ್ಲಾ ಚೆನ್ನಾಗಿವೆ. ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಕೊಂಡುಕೊಳ್ಳುತ್ತಿದ್ದಾರೆ   ಎಂದು ತೋಟಗಾರಿಕೆ  ತಜ್ಞ ಡಾ.ಎಸ್. ವಿ. ಹಿಟ್ಟಲ್ ಮಣಿ ತಿಳಿಸಿದ್ದಾರೆ.ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಮಾವು ಮಂಡಳಿ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್, ಜನವರಿವರೆವಿಗೂ ಹೂ ಚೆನ್ನಾಗಿ ಬಂದಿದ್ದರಿಂದ ಉತ್ತಮ ಇಳುವರಿಯನ್ನು ನಿರೀಕ್ಷಿಸಲಾಗಿತ್ತು. ಆದರೆ, ಅನೇಕ ಕಡೆ ಸುರಿದ ಮಳೆ ಹಾಗೂ ಆಲಿಕಲ್ಲಿನಿಂದಾಗಿ ಹಣ್ಣುವಿಗೆ ತೊಂದರೆಯಾಗಿದೆ ಎಂದರು. 

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತದೆ. ಆದರೆ. ಆಲಿಕಲ್ಲು ಮಳೆಯಿಂದಾಗಿ ಹಾನಿಯಾಗಿದೆ . ಆದರೂ ಉತ್ತಮ ಇಳುವರಿಯ ಮಾವು ಬಂದಿರುವುದಾಗಿ  ಅವರು  ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment