ಸುದ್ದಿ

ಹಣ ಕದ್ದು ಪರಾರಿಯಾಗುತ್ತಿದ್ದ ಖದೀಮರ ಸೆರೆ ಹಿಡಿದ ಕಾಂಗ್ರೆಸ್​ನ ಯುವ ಮುಖಂಡ

ರಾಯಚೂರು: ಹಾಲಿನ ಡೈರಿ ವಾಹನವನ್ನು ಅಡ್ಡಗಟ್ಟಿ ಡ್ರೈವರ್ ಹಾಗೂ ಕ್ಲೀನರ್​ಗೆ ಚಾಕುವಿನಿಂದ ಬೆದರಿಸಿ ಹಣ ಕದ್ದೊಯ್ಯುತ್ತಿದ್ದ ಖದೀಮರನ್ನ ಸೆರೆ ಹಿಡಿಯುವಲ್ಲಿ ಜಿಲ್ಲೆಯ ಕಾಂಗ್ರೆಸ್​ನ ಯುವ ಮುಖಂಡ ಯಶ್ವಸಿಯಾಗಿದ್ದಾರೆ.

ಜಿಲ್ಲೆಯ ಮಾನ್ವಿ ತಾಲೂಕಿನ ನಿಲೋಗಲ್ ಗ್ರಾಮದ ಹೊರವಲಯದ ಬಳಿ ರಾಯಚೂರು ಕಡೆ ಬರುತ್ತಿದ್ದ ಹಾಲಿನ ಡೈರಿಯ ವಾಹನವನ್ನ ಅಡ್ಡಗಟ್ಟಿ, ಗುರುಗುಂಟಾ ಗ್ರಾಮದ ವಾಹನ ಮಾಲೀಕ ಪರಶುರಾಮ್ ಹಾಗೂ ಕ್ಲೀನರ್ ಅಬಾಸ್ ಎಂಬವವರಿಗೆ ಐವರು ಕಳ್ಳರ ಗುಂಪೊಂದು ಚಾಕು ತೋರಿಸಿ ಬೆದರಿಸಿದೆ. ಹಾಲು ಖರೀದಿಸಲು ತೆಗೆದುಕೊಂಡು ಹೋಗುತ್ತಿದ್ದ 1.48 ಲಕ್ಷ ರೂ. ಹಣವನ್ನ ಕಸಿದುಕೊಂಡು ಹೋಗಿದ್ದಾರೆ. ಇದರಿಂದ ಹಾಲಿನ ಡೈರಿಯ ವಾಹನ ಮಾಲೀಕ ಹಾಗೂ ಕ್ಲೀನರ್ ಕಂಗಾಲಾಗಿ ಕುಳಿತಿದ್ದರು.
ಇದೇ ಮಾರ್ಗದಲ್ಲಿ ಹಟ್ಟಿಯಿಂದ ರಾಯಚೂರಿಗೆ ತೆರಳುತ್ತಿದ್ದ ಹಟ್ಟಿ ಜಿಪಂ ಸದಸ್ಯೆ ಸಹಾರ ಬೇಗಂ ಪುತ್ರ ಹಾಗೂ ಕಾಂಗ್ರೆಸ್​ನ ಯುವ ಮುಖಂಡ ಅಮ್ಜದ್ ಸೇಠ್, ಖದೀಮರನ್ನ ಸೆರೆ ಹಿಡಿಯಲು ತಮ್ಮ ಕಾರಿನಿಂದ ಬೆನ್ನತ್ತಿದ್ದಾರೆ. ಕಳ್ಳರ ಬೆನ್ನತ್ತಿದ್ದ ಕಾರಿಗೆ ಕಲ್ಲು ಎಸೆಯುತ್ತಿದ್ದರೂ ಆದಾವುದನ್ನ ಲೆಕ್ಕಿಸದೆ ಖದೀಮರ ವಾಹನ ಚೇಸ್ ಮಾಡಿ ಗಣದಿನ್ನಿ ಗ್ರಾಮಸ್ಥರ ಸಹಾಯದಿಂದ ಸೆರೆ ಹಿಡಿದ್ದಾರೆ. ಸೆರೆ ಸಿಕ್ಕವರನ್ನ ಗಣದಿನ್ನಿ ಗ್ರಾಮಸ್ಥರು ಹಿಗ್ಗಮುಗ್ಗಾ ಥಳಿಸಿ, ಬಳಿಕ ಸಿರವಾರ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತರನ್ನ ಶಿವಮೊಗ್ಗ ಮೂಲದವರೆಂದು ಗುರುತಿಸಲಾಗಿದ್ದು, ಈ ಕುರಿತು ಸಿರವಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

About the author

ಕನ್ನಡ ಟುಡೆ

Leave a Comment