ಸಿನಿ ಸಮಾಚಾರ

ಹಳ್ಳಿ ಸೆಟ್ ನಲ್ಲಿ ಧ್ರುವ ಸರ್ಜಾ ಪ್ರೇರಣಾ ಜೊತೆ ಭರ್ಜರಿ ನಿಶ್ಚಿತಾರ್ಥ

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಜೊತೆ ಭಾನುವಾರ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಧ್ರುವ ಮತ್ತು ಪ್ರೇರಣಾ ಅವರ ಮದುವೆಗೆ ಡೇಟ್ ಕೂಡ ಫಿಕ್ಸ್ ಆಗಿದೆ.
ಧ್ರುವ ಮತ್ತು ಪ್ರೇರಣಾ ಅವರ ಮದುವೆಯನ್ನು ಗುರು-ಹಿರಿಯರು ಮುಂದಿನ ವರ್ಷ ಏಪ್ರಿಲ್ ನಲ್ಲಿ ಫಿಕ್ಸ್ ಮಾಡಿದ್ದಾರೆ. ಆದರೆ ಇನ್ನೂ ದಿನಾಂಕವನ್ನು ನಿಗದಿ ಮಾಡಿಲ್ಲ. ಭಾನುವಾರ ಬನಶಂಕರಿಯ ಆಂಜನೇಯನ ಸನ್ನಿಧಿಯಲ್ಲಿ ಸುಂದರ ಹಸಿರು ಮಂಟಪ, ಪವಿತ್ರ ಗೋವುಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಧ್ರುವ ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಅವರಿಗೆ 21 ಲಕ್ಷದ ವಜ್ರದ ಉಂಗುರವನ್ನು ತೊಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಸರ್ಜಾ ಕುಟುಂಬದ ಸಡಗರ ಸಂಭ್ರಮದಲ್ಲಿ ಸ್ಯಾಂಡಲ್‍ವುಡ್ ತಾರೆಯರೂ ಹಾಗೂ ಆತ್ಮೀಯ ಸ್ನೇಹಿತರು ಆಗಮಿಸಿ ಶುಭ ಕೋರಿದರು

About the author

ಕನ್ನಡ ಟುಡೆ

Leave a Comment