ಕ್ರೀಡೆ

ಹಸಿನ್ ಮೊದಲ ಮದುವೆ ವಿಷಯ ನನ್ನಿಂದ ಮುಚ್ಚಿಟ್ಟಿದ್ದಳು ಎಂದು ಹೇಳಿರುವ ಶಮಿ

ನವದೆಹಲಿ: ಟೀಂ ಇಂಡಿಯಾ ವೇಗ ಆಟಗಾರ ಮೊಹಮ್ಮದ್ ಶಮಿ ಮತ್ತು ಹಸಿನ್ ಜಹಾನ್ ನಡುವಿನ ಜಗಳದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ವಿಚಾರಗಳ ಬೆಳವಣಿಗೆಗಳು ಆಗುತ್ತಿವೆ. ಇದೀಗ ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಹಸಿನ್ ತನ್ನ ಮೊದಲ ಮದುವೆ ವಿಷಯವನ್ನು ನನ್ನಿಂದ ಮುಚ್ಚಿಟ್ಟಿದ್ದಳು ಎಂದು ಹೇಳಿದ್ದಾರೆ.

ನನ್ನ ಜತೆ ಆಕೆಯದ್ದು ಎರಡನೇ ಮದುವೆ ಎನ್ನುವುದು ನನಗೆ ತಿಳಿದಿರಲಿಲ್ಲ. ಮದುವೆಯ ಬಳಿಕ ಆಕೆಗೆ ಇಬ್ಬರು ಹೆಣ್ಣು ಮಕ್ಕಳಿರುವುದು ತಿಳಿಯಿತು. ಈ ಕುರಿತು ಹಸಿನ್ ಜಹಾನ್ ಗೆ ಪ್ರಶ್ನಿಸಿದಾಗ ಆಕೆ ಇದು ನನ್ನ ಮಕ್ಕಳಲ್ಲ. ಸಹೋದರಿಯ ಮಕ್ಕಳು ಎಂದು ಹೇಳಿದ್ದಳು ಎಂದು ಶಮಿ ತಿಳಿಸಿದ್ದಾರೆ.

ಇನ್ನು ಬೇರೆ ನಂಬರ್ ನಿಂದ ಶಮಿ ಜೀವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಹಸಿನ್ ಜಹಾನ್ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅವರು ಸಂಧಾನಕ್ಕಾಗಿ ನಾನು ಸಾಕಷ್ಟು ಪ್ರಯತ್ನಪಡುತ್ತಿದ್ದೇನೆ. ದೂರವಾಣಿ ಕರೆ ಮಾಡಿ ಎಲ್ಲವನ್ನನ್ನೂ ಇಲ್ಲಿಗೆ ಅಂತ್ಯಗೊಳಿಸೋಣ ಎಂದು ಆಕೆಗೆ ಹೇಳುತ್ತಿದ್ದೇನೆ. ಹಾಗೆ ಮಗಳ ಭವಷ್ಯದ ಬಗ್ಗೆ ಕಾಳಜಿದೆ ಎಂದು ಶಮಿ ಹೇಳುತ್ತಿದ್ದಾರೆ.

 

About the author

ಕನ್ನಡ ಟುಡೆ

Leave a Comment