ಸಿನಿ ಸಮಾಚಾರ

ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಮೇಲಿನ ಅಮಾನತು ಶಿಕ್ಷೆ ತತ್‏ಕ್ಷಣದಿಂದ ತೆರವು: ಸಿಒಎ

ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಮೇಲಿನ ಅಮಾನತು ಶಿಕ್ಷೆಯನ್ನು ವಾಪಸ್ ಪಡೆಯಲು ಸಿಒಎ ಆದೇಶಿಸಿದ್ದು,  ತತ್ ಕ್ಷಣದಿಂದಲೇ ಜಾರಿಗೆ ಬರಲಿದೆ. ತಟಸ್ಥ ಸಲಹೆಗಾರ (ಅಮಿಕಸ್ ಕ್ಯುರಿ) ಅವರ ಸಲಹೆಯನ್ನು ಪಡೆದ ನಂತರ ಸಿಒಎ ಈ ಆದೇಶವನ್ನು ಹೊರಡಿಸಿದೆ. ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಕರಣ್ ಜೋಹರ್ ಅವರ ಟಿವಿ ಶೋನಲ್ಲಿ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ಅವರನ್ನು ಆಕ್ಷಣವೇ ಹೊರಗಿಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ತನಿಖೆ ನಡೆಯುತ್ತಿದ್ದು, ಸುಪ್ರೀಂ ಕೋರ್ಟ್ ಓಂಬುಡ್ಸ್‌ಮನ್ ನ್ನೂ ನೇಮಕ ಮಾಡಿದೆ. ಫೆ.05 ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿಕಸ್ ಕ್ಯೂರಿಯ ಪಿಎಸ್ ನರಸಿಂಹ ಅವರ ಸಲಹೆ ಪಡೆದ ಬಳಿಕ ಅಮಾನತು ಶಿಕ್ಷೆಯನ್ನು ವಾಪಸ್ ಪಡೆಯಲು ಆದೇಶಿಸಲಾಗಿದೆ ಎಂದು ಸಿಒಎ ಹೇಳಿಕೆ ಬಿಡುಗಡೆ ಮಾಡಿದೆ. ಅಮಾನತು ಶಿಕ್ಷೆ ವಾಪಸ್ ಪಡೆಯಲಾಗಿರುವುದರಿಂದ ಪಾಂಡ್ಯ ಈಗ ನ್ಯೂಜಿಲ್ಯಾಂಡ್ ಸರಣಿಗೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ.

About the author

ಕನ್ನಡ ಟುಡೆ

Leave a Comment