ರಾಜ್ಯ ಸುದ್ದಿ

ಹಾಸನದಲ್ಲಿ ಐಟಿ ರೇಡ್: ಸಚಿವ ಪುಟ್ಟರಾಜು, ರೇವಣ್ಣ ಆಪ್ತರಿಗೆ ಬೆಳ್ಳಂಬೆಳಗ್ಗೆ ಶಾಕ್

ಬೆಂಗಳೂರು: ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ (ರಾಜ್ಯದಲ್ಲಿ ಮೊದಲ ಹಂತದ ಮತದಾನ)ಕ್ಕೆ ಇನ್ನು ಎರಡೇ ದಿನಗಳು ಉಳಿದಿದ್ದು, ದೇಶದ ಹಲವೆಡೆ ಐಟಿ ಅಧಿಕಾರಿಗಳು ಪ್ರಭಾವಿ ರಾಜಕಾರಣಿಗಳು ಮತ್ತು ಅವರ ಆಪ್ತರ ನಿವಾಸ, ಕಚೇರಿಗಳಿಗೆ ದಾಳಿ ನಡೆಸಿದ್ದಾರೆ.

ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿರುವ ಸಚಿವ ಸಿ.ಎಸ್‌ ಪುಟ್ಟರಾಜು ಅವರ ಆಪ್ತ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ತಿಮ್ಮೇಗೌಡರ ಮನೆ, ಮರದ ಕಾರ್ಖಾನೆ, ಅಂಗಡಿ ಹಾಗೂ ಪೆಟ್ರೋಲ್ ಬಂಕ್‌ಗಳ ಮೇಲೆ ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

ಹಾಸನ ಜಿಲ್ಲೆಯಲ್ಲೂ ಸಚಿವ ಎಚ್‌.ಡಿ ರೇವಣ್ಣ ಅವರ ಆಪ್ತರ ಮನೆ ಮೇಲೆ ಇಂದು ಬೆಳಗಿನ ಜಾವ ಏಕಕಾಲಕ್ಕೆ ಐಟಿ ದಾಳಿ ನಡೆದಿದೆ. ಜೆಡಿಎಸ್ ವಿಧಾನಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ, ಮುಖಂಡ ಕಾರ್ಲೆ ಇಂದ್ರೇಶ್, ಜಿಪಂ ಸದಸ್ಯ ಮೊಗಣ್ಣ ಮತ್ತಿತರರ ಮನೆ ಮೇಲೆ ಏಕಕಾಲಕ್ಕೆ ಐಟಿ ದಾಳಿ ನಡೆದಿದೆ.

ಮದ್ದೂರು ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ವಲಯದ ಶ್ರೀ ಸೋಮೇಶ್ವರ ಪರ್ಟಿಲೈಸರ್ಸ್ ಮುಖ್ಯ ಕಛೇರಿ ಮೇಲೂ ಮಂಗಳವಾರ ಬೆಳಗಿನ ಜಾವ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಡ್ಯ ಜಿ.ಪಂ.ಅದ್ಯಕ್ಷೆ ನಾಗರತ್ನಸ್ವಾಮಿ ಅವರ ಪತಿ ಜೆಡಿಎಸ್ ಮುಖಂಡ ಎಸ್.ಪಿ.ಸ್ವಾಮಿ ಒಡೆತನದ ಕಾರ್ಖಾನೆ ಇದಾಗಿದೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

About the author

ಕನ್ನಡ ಟುಡೆ

Leave a Comment