ರಾಜ್ಯ ಸುದ್ದಿ

ಹಾಸನದಲ್ಲಿ ರೇವಣ್ಣ ಆಪ್ತರ ಮನೆಗಳ ಮೇಲೂ ಐಟಿ ದಾಳಿ

ಹಾಸನ: ಸಿಎಂ ಆಪ್ತ ಸಿಎಸ್ ಪುಟ್ಟರಾಜು ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಂತೆಯೇ ಅತ್ತ ಸಚಿವ ಎಚ್ ಡಿ ರೇವಣ್ಣ ಆಪ್ತರಿಗೂ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಎಚ್ ಡಿ ರೇವಣ್ಣ ಅವರ ಮೂವರು ಆಪ್ತರಿಗೆ ಸೇರಿದೆ ಎನ್ನಲಾದ 10ಕ್ಕೂ ಹೆಚ್ಚು ಮನೆ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ರೇವಣ್ಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಗುತ್ತಿಗೆದಾರರಾದ ನಾರಾಯಣ ರೆಡ್ಡಿ, ಅಶ್ವತ್, ರಾಯಗೌಡ ಅವರ ಹಾಸನದ ಮನೆಗಳ ಮೇಲೆ ದಾಳಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವರ ಮನೆಗಳು ಮಾತ್ರವಲ್ಲದೇ ಅವರ ಬೆಂಬಲಿಗರ ಮನೆಗಳ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಯಗೌಡ ಅವರ ಚೆನ್ನರಾಯಪಟ್ಟಣದ ನಿವಾಸವೂ ಸೇರಿದಂತೆ ಒಟ್ಟು 10 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪತ್ರಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಮಂಡ್ಯದಲ್ಲಿ ದಾಳಿ ಮಾಡಿದ ಐಟಿ ಅಧಿಕಾರಿಗಳ ಮತ್ತೊಂದು ತಂಡವೇ ಈ ದಾಳಿ ಮಾಡಿದ್ದು, ಸುಮಾರು 10 ಕಡೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

About the author

ಕನ್ನಡ ಟುಡೆ

Leave a Comment