ರಾಜಕೀಯ

ಹಾಸನ ನಂತರ ಇಂದು ಮಂಡ್ಯಕ್ಕೆ ಹೆಚ್.ಡಿ.ದೇವೇಗೌಡರ ಕಣ್ಣೀರು ಶಿಫ್ಟ್: ಬಿಜೆಪಿ ಟೀಕೆ

ಬೆಂಗಳೂರು: ಹಾಸನದಲ್ಲಿ ಲೋಕಸಭೆ ಕ್ಷೇತ್ರಕ್ಕೆ ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದಾಗಿ ಅಧಿಕೃತ ಘೋಷಣೆ ಮಾಡಿದ್ದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸೇರಿದಂತೆ ಅವರ ಕುಟುಂಬ ವೇದಿಕೆಯಲ್ಲಿಯೇ ಕಣ್ಣೀರು ಹಾಕಿದ್ದಕ್ಕೆ ಬಿಜೆಪಿ ಟೀಕೆಯನ್ನು ಗುರುವಾರ ಕೂಡ ಮುಂದುವರಿಸಿದೆ. ಇಂದು ದೇವೇಗೌಡರು ಮಂಡ್ಯದಲ್ಲಿ ತಮ್ಮ ಮತ್ತೊಬ್ಬ ಮೊಮ್ಮಗ ನಿಖಿಲ್ ಕುಮಾರ್ ಅವರ ಹೆಸರನ್ನು ಲೋಕಸಭೆ ಚುನಾವಣೆಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ನಿನ್ನೆಯ ಕಣ್ಣೀರಿನ ನಾಟಕ ಇಂದು ಮಂಡ್ಯಕ್ಕೆ ಶಿಫ್ಟ್ ಆಗಲಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. ದೇವೇಗೌಡರ ಕುಟುಂಬಕ್ಕೆ ಅಳುವ ಕಲೆ ಸಿದ್ದಿಸಿದೆ, ಸಾರ್ವಜನಿಕವಾಗಿ ಅತ್ತು ಜನರ ಅನುಕಂಪ ಗಿಟ್ಟಿಸಿಕೊಳ್ಳುವ ಕಲೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ. ಕಣ್ಣೀರಿನ ಪ್ರಸಂಗ ನಿನ್ನೆಗೆ ಮುಗಿಯುವುದಿಲ್ಲ, ಇಂದು ಮಂಡ್ಯದಲ್ಲಿ ಮುಂದುವರಿಯಲಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

About the author

ಕನ್ನಡ ಟುಡೆ

Leave a Comment