ರಾಜ್ಯ ಸುದ್ದಿ

ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಗುಣಮಟ್ಟದ ಊಟ

ಬೆಂಗಳೂರು: ಹಾಸ್ಟೆಲ್‌ನ ಪ್ರತಿ ವಿದ್ಯಾರ್ಥಿಗೆ ರಾಜ್ಯ ಸರಕಾರ ಮಾಸಿಕ ಸರಾಸರಿ 1500 ರೂ.ನಿಂದ 2000 ರೂ.ವರೆಗೆ ಖರ್ಚು ಮಾಡುತ್ತದೆ. ಈ ಹಣದಲ್ಲಿ ಪೌಷ್ಟಿಕಾಂಶವಿರುವ ಊಟ ನೀಡುವ ಜತೆಗೆ, ಅವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕೆಂಬ ಸೂಚನೆ ಇರುತ್ತದೆ. ಆದರೆ ಹಾಸ್ಟೆಲ್‌ಗಳನ್ನು ನಡೆಸುವ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳು ನಿಗದಿತ ಮೊತ್ತಕ್ಕೂ ಕನ್ನ ಹಾಕಿ, ಇಡೀ ಹಾಸ್ಟೆಲ್‌ ವ್ಯವಸ್ಥೆಯನ್ನು ಗಂಜಿ ಕೇಂದ್ರವನ್ನಾಗಿಸಿವೆ!

ಹಾಸ್ಟೆಲ್‌ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ ಎಂದರೆ, ಅವರ ಬೇಡಿಕೆ ಫಲಕದಲ್ಲಿ ಮೊದಲ ಆಗ್ರಹವೇ ‘ಗುಣಮಟ್ಟದ ಊಟ ನೀಡಿ!’ ಎಂಬುದೇ ಆಗಿರುತ್ತದೆ! ಹಣವಿದ್ದರೂ  ಗುಣಮಟ್ಟದ ಊಟ ಸಿಗುತ್ತಿಲ್ಲವೇಕೆ?

About the author

ಕನ್ನಡ ಟುಡೆ

Leave a Comment