ಸಿನಿ ಸಮಾಚಾರ

ಬಾಲಿವುಡ್ ಹಾಸ್ಯನಟ ರಾಜ್‌ಪಾಲ್ ಯಾದವ್‌ಗೆ 3 ತಿಂಗಳ ಜೈಲು ಶಿಕ್ಷೆ

ನವದೆಹಲಿ: ದೆಹಲಿ ಮೂಲದ ಉದ್ಯಮಿ ಎಮ್ ಜಿ ಅಗರ್ವಾಲ್ ಬಳಿ ಪಡೆದಿದ್ದ 5 ಕೋಟಿ ರುಪಾಯಿ ಸಾಲವನ್ನು ಹಿಂತಿರುಗಿಸದ ಕಾರಣ ದೆಹಲಿ ಹೈ ಕೋರ್ಟ್ ಬಾಲಿವುಡ್ ಹಾಸ್ಯ ನಟ ರಾಜ್‌ಪಾಲ್ ಯಾದವ್‌ಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
2010ರಲ್ಲಿ ರಾಜ್‌ಪಾಲ್ ಯಾದವ್‌ ಮೊಟ್ಟ ಮೊದಲ ಸಲ ನಟಿಸಿ, ನಿರ್ದೇಶಿಸಿದ ಆಟ ಪಾಟ ಲಪಾಟ ಚಿತ್ರಕ್ಕಾಗಿ ದೆಹಲಿ ಮೂಲದ ಮರುಳಿ ಪ್ರಾಜೆಕ್ಟ್ ಕಂಪೆನಿ ಮಾಲೀಕ ಎಮ್ ಜಿ ಅಗರ್ವಾಲ್ ಬಳಿ 5 ಕೋಟಿ ರುಪಾಯಿ ಸಾಲ ಪಡೆದಿದ್ದರು. ಈ ಮೊತ್ತಕ್ಕೆ ಬಡ್ಡಿ ಸೇರಿ 2011 ಡಿಸೆಂಬರ್ 3ರ ಸಮಯಕ್ಕೆ ಮತ್ತೆ ವಾಪಸ್ ಮಾಡುತ್ತೇನೆ ಎಂದು ಮಾತುಕೊಟ್ಟಿದ್ದರು. ಆದರೆ ರಾಜ್‌ಪಾಲ್ ಯಾದವ್‌ ಮಾತು ತಪ್ಪಿದ್ದರು. ಈ ಹಿಂದೆ ದೆಹಲಿಯ ಕಾರ್ಕಾರದುಮ ನ್ಯಾಯಾಲಯ ರಾಜ್‌ಪಾಲ್ ಯಾದವ್‌ಗೆ ಆರು ತಿಂಗಳ ಜೈಲು ಶಿಕ್ಷೆ ಜತೆಗೆ 11.2 ಕೋಟಿ ರುಪಾಯಿ ದಂಡ, ಆತನ ಪತ್ನಿ ರಾಧಾ ಯಾದವ್ ಗೆ 70 ಲಕ್ಷ ದಂಡ ವಿಧಿಸಿತ್ತು.

About the author

ಕನ್ನಡ ಟುಡೆ

Leave a Comment