ಸಿನಿ ಸಮಾಚಾರ

ಹಿಂದಿ ಮೀಡಿಯಂ 2ನಲ್ಲಿ ಶಾರುಖ್‌ ಕಾಜೊಲ್‌

ಇರ್ಫಾನ್‌ ಖಾನ್‌ ನಟನೆಯ ಹಿಂದಿ ಮೀಡಿಯಂ ಸಿನಿಮಾದ ಸಿಕ್ವೆಲ್‌ನಲ್ಲಿ ನಟ ಶಾರುಖ್‌ ಖಾನ್‌ ಮತ್ತು ಕಾಜೊಲ್‌ ನಟಿಸುವ ಸಾಧ್ಯತೆ ಇದೆ. ಈ ಸಿನಿಮಾದ ನಿರ್ಮಾಪಕ ದಿನೇಶ್‌ ವಿಜನ್‌ ಈ ಕುರಿತು ಶಾರುಖ್‌ ಮತ್ತು ಕಾಜೊಲ್‌ ಜೊತೆ ಮಾತುಕತೆ ನಡೆಸಿದ್ದಾರೆ. ಇರ್ಫಾನ್‌ ಕೂಡಾ ಈ ಸಿನಿಮಾದ ಒಂದು ಪಾತ್ರವಾಗಲಿದ್ದಾರೆ.

ಹಿಂದಿ ಮೀಡಿಯಂ ಸಿಕ್ವೆಲ್‌ನಲ್ಲಿ ಕಥೆ ಹೊಸದಾಗಿಯೇ ಶುರುವಾಗಲಿದೆಯಂತೆ. ಅಮೆರಿಕದಲ್ಲಿ ಈ ಸಿನಿಮಾದ ಶೂಟಿಂಗ್‌ ನಡೆಯಲಿದ್ದು, ಈ ಸಿನಿಮಾದ ಸ್ಕ್ರಿಪ್ಟ್‌ ಅನ್ನು ಶಾರುಖ್‌ ಮತ್ತು ಕಾಜೊಲ್‌ಗೆ ನೀಡಲಾಗಿದೆ. ಒಟ್ಟಿನಲ್ಲಿ ಬಾಲಿವುಡ್‌ನ ಯಶಸ್ವಿ ಶಾರುಖ್‌ ಮತ್ತು ಕಾಜೊಲ್‌ ಜೋಡಿ ಮತ್ತೊಮ್ಮೆ ತೆರೆ ಮೇಲೆ ರಾರಾಜಿಸಲಿದೆ.

About the author

ಕನ್ನಡ ಟುಡೆ

Leave a Comment