ರಾಜಕೀಯ

ಹಿಂದೂಗಳನ್ನು ವಿಭಾಜಿಸಲು ಬಿಡಬೇಡಿ: ಮೋಹನ್‌ ಭಾಗವತ್‌

ನಾಗಪುರ: ಲಿಂಗಾಯತ ಮತ್ತು ವೀರಶೈವ ಸಮುದಾಯವನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸಿ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಕ್ರಮದ ವಿರುದ್ಧ ಗುಡುಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸಂಘಚಾಲಕರಾದ ಮೋಹನ್‌ ಭಾಗವತ್‌  ಇದು ಅಖಂಡ ಹಿಂದೂ ಧರ್ಮವನ್ನು ಒಡೆಯುವ ತಂತ್ರವಾಗಿದೆ ಎಂದು ಹೇಳಿದ್ದಾರೆ.

ಕೆಟ್ಟ ಸ್ವಾರ್ಥ ಚಿಂತನೆ ಹೊಂದಿರುವ ಕೆಲವು ಜನರ ಗುಂಪು ಹಿಂದೂ ಸಮುದಾಯವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ಉಲ್ಲೇಖಿಸದೆ ಎಂದು ಹೇಳಿದರು. ಆದರೆ ಪ್ರತಿಯೊಬ್ಬರು ಇದನ್ನು ವಿರೋಧಿಸಬೇಕು. ಯಾವುದೇ ಪರಿಸ್ಥಿತಿಯಲ್ಲೂ ಹಿಂದೂ ಧರ್ಮವನ್ನು ಒಡೆಯಲು ಬಿಡಬಾರದು ಎಂದು ತಿಳಿದ್ದಾರೆ.
 

 

About the author

ಕನ್ನಡ ಟುಡೆ

Leave a Comment