ಸುದ್ದಿ

ಹಿಂದೂ ದೇವರುಗಳನ್ನ ಅವಮಾನಿಸಿದ ನಿಡುಮಾಮಿಡಿ ಸ್ವಾಮಿ ವಿರುದ್ಧ ರಹೀಮ್ ಉಚ್ಛಿಲ್ ಗರಂ

ಮಂಗಳೂರು: ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮದ ಬಗ್ಗೆ ಹಾಗೂ ಹಿಂದೂ ಧರ್ಮದ ದೇವ ದೇವತೆಗಳ ಬಗ್ಗೆ ಅವಮಾನಕರ ಹೇಳಿಕೆ ನೀಡಿರುವ ನಿಡುಮಾಮಿಡಿ ಶ್ರೀಗಳ ಹೇಳಿಕೆಯನ್ನು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ಖಂಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಮೂಲಕ ಶ್ರೀಗಳ ನಡೆಯನ್ನು ಖಂಡಿಸಿರುವ ಉಚ್ಚಿಲ್ , ಸಮಾಜದ ಎಲ್ಲಾ ವರ್ಗಕ್ಕೂ ಮಾರ್ಗದರ್ಶನ ನೀಡಬೇಕಾದ ಸ್ವಾಮೀಜಿಯವರು ಒಂದು ಧರ್ಮದ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹಾಗೇ ಮಾತನಾಡುವುದು ಸರಿಯಲ್ಲ. ಇನ್ನೊಂದು ಧರ್ಮವನ್ನು ಅವಹೇಳನ ಮಾಡುವುನ್ನು ಹಾಗೂ ಪರಧರ್ಮದ ದೇವತೆಗಳನ್ನು ನಿಂದಿಸುವುದನ್ನು ಇಸ್ಲಾಂ ವಿರೋಧಿಸುತ್ತದೆ. ಆದ್ದರಿಂದ ಹಿಂದೂ ಧರ್ಮದ ಅವಹೇಳನೆಯನ್ನು ನೈಜ ಮುಸ್ಲಿಂನಾದವನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

ನಮ್ಮಲ್ಲಿ ದೇವರೇ ಇಲ್ಲ, ಷಣ್ಮುಖ ಹೊರ ದೇಶದಿಂದ ಬಂದವ: ನಿಡುಮಾಮಿಡಿ ಶ್ರೀ ವಿವಾದಾತ್ಮಕ ಹೇಳಿಕೆ

ಮುಸ್ಲಿಂ ಸಮಾಜ ಸ್ವಾಮೀಜಿಯವರ ಈ ಹೇಳಿಕೆಯಿಂದ ಸಂತುಷ್ಟಗೊಳ್ಳುವುದಿಲ್ಲ ಎಂಬ ವಾಸ್ತವಾಂಶವನ್ನು ಸ್ವಾಮೀಜಿಯವರು ಮಣಗಾಣಲಿ. ಒಂದು ವೇಳೆ ಇಂತಹ ಹೇಳಿಕೆಯನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿದಲ್ಲಿ ಅಥವಾ ಇಂತಹ ಭಾಷಣಗಳಿಗೆ ಚಪ್ಪಾಳೆ ತಟ್ಟಿದರೆ ಅವರು ಪ್ರವಾದಿ ಅನುಯಾಯಿಯಾಗಲು ಸಾಧ್ಯವಿಲ್ಲ. ಇದು ಇಸ್ಲಾಮಿನ ನಿಯಮವಾಗಿದೆ ಎಂದು ರಹೀಂ ಉಚ್ಚಿಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರವಾದಿ ನಿಂದನೆಯನ್ನು ವಿಶ್ವದ ಯಾವುದೇ ಮೂಲೆಯಲ್ಲಿ ನಡೆದರೂ ಜಾಗತಿಕವಾಗಿ ಮುಸ್ಲಿಮರು ಒಗ್ಗಟ್ಟಾಗಿ ಖಂಡಿಸುತ್ತಾರೆ. ಆದರೆ ಹಿಂದೂ ಧರ್ಮದ ದೇವತೆಗಳನ್ನು ಕೆಲವು ಬುದ್ಧಿ ಜೀವಿಗಳು ಅವಮಾನಿಸುವಾಗ ಸಮಾಜ ಒಗ್ಗಟ್ಟಾಗಿ ಖಂಡಿಸದೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅಪಮಾನಕ್ಕೀಡಾಗುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ

About the author

ಕನ್ನಡ ಟುಡೆ

Leave a Comment