ರಾಷ್ಟ್ರ

ಹಿಂದೂ ಮಹಾಸಾಗರದ ಮೇಲೆ ಭಾರತದ ಕಣ್ಗಾವಲು

‘ಹಿಂದೂ ಮಹಾಸಾಗರದಲ್ಲಿ ಯಾವುದೇ ರೀತಿಯದು ಸ್ಸಾಹಸಕ್ಕೆ ಇಳಿದರೆ ಹುಷಾರ್… ನಿಮ್ಮ ಮೇಲೆ 24X7, ಕಣ್ಗಾವಲು ಇಟ್ಟಿದ್ದೇವೆ,” ಎಂಬ ಪ್ರಬಲ ಸಂದೇಶವನ್ನು ಭಾರತೀಯನೌಕಾಪಡೆ ಚೀನಾಕ್ಕೆ ರವಾನಿಸಿದೆ.ಚೀನಾ ಹಿಂದೂ ಮಹಾ ಸಾಗರದ ಕೆಲವು ಭಾಗಗಳಲ್ಲಿ ಅಕ್ರಮವಾಗಿ ತನ್ನನೌಕೆಗಳನ್ನು ನಿಯೋಜಿಸುತ್ತಿರುವುದಕ್ಕೆ ಪ್ರತಿಯಾಗಿ ಭಾರತ ಈ ಕ್ರಮ ಕೈಗೊಂಡಿರುವುದಾಗಿ ಹೇಳಲಾಗಿದೆ. ಇದೀಗ ಭಾರತ ತನ್ನ ಜಲವ್ಯಾಪ್ತಿಯ ಮೇಲೆ ಕಣ್ಣಾವಲು ವ್ಯವಸ್ಥೆ ಮಾಡಿರುವುದಲ್ಲದೆ ಅದನ್ನುಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕವೇ ಚೀನಾಕ್ಕೆ ಸ್ಪಷ್ಟವಾಗಿ ತಿಳಿಸಿದೆ. ಭಾರತೀಯ ನೌಕಾಪಡೆಯ ಸುಮಾರು 50 ಹಡಗುಗಳನ್ನು ಭಾರತದ ಜಲವ್ಯಾಪ್ತಿಗೊಳಪಟ್ಟ ಪ್ರದೇಶ ಮತ್ತು ಅಕ್ರಮ ‘ಚಲನವಲನ ನಡೆಯುವ ಸಂಭಾವ್ಯ ಪ್ರದೇಶಗಳಲ್ಲಿ ನಿಯೋಜಿಸಿದೆ. ಇವುದಿನದ 24 ಗ0ಟೆಯೂ ಕಟ್ಟೆಚ್ಚರ ವಹಿಸುತ್ತಿವೆ.

ಚೀನಾಕ್ಕೆ ಎಚ್ಚರಿಕೆ ಹೇಗೆ?

ಚೀನಾ ಹಿಂದೂಮಹಾಸಾಗರದಲ್ಲಿ ತನ್ನಹಡಗುಗಳನ್ನು ಇಟ್ಟು ಗೂಢಚಾರಿಕೆ ನಡೆಸುತ್ತದೆ.ಚೀನಾಕ್ಕೆ ಜಿಬೌಟಿಯಲ್ಲಿ ಒಂದು ನೌಕಾನೆಲೆ ಇದೆ.ಅದು ಪಾಕಿಸ್ತಾನದ ಗಾದರ್‌ನಲ್ಲಿ ಬಂದರು ನಿರ್ಮಾಣ ಮಾಡುತ್ತಿದೆ.ಗ್ವಾದರ್, ಪರ್ಷಿಯನ್ಕೊಲ್ಲಿಯ ಪಕ್ಕದಲ್ಲೇ ಇದೆ.ಭಾರತದ ಈ ನಡೆ ಚೀನಾದ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡುತ್ತದೆ.

ಎಲ್ಲಿ ನಿಯೋಜನೆ

* ಪರ್ಷಿಯನ್ಕೊಲ್ಲಿಯಿಂದ ಮಲಾಕ್ಕಾ ಜಲಸಂಧಿವರೆಗೆ

* ಬಂಗಾಳಕೊಲ್ಲಿಯ ಉತ್ತರದಿಂದ ಹಿಂದೂಸಾಗರದವರೆಗೆ

* ಹಿಂದೂಮಹಾಸಾಗರ ದಿಂದ – ಆಫ್ರಿಕಾದ ಪೂರ್ವತೀರದವರೆಗೆ

* ದಕ್ಷಿಣ ಹಿಂದೂಮಹಾಸಾಗರ

About the author

ಕನ್ನಡ ಟುಡೆ

Leave a Comment