ರಾಷ್ಟ್ರ ಸುದ್ದಿ

ಹಿಮಾಚಲ ಪ್ರದೇಶದಲ್ಲಿ ನಿರ್ಮಾಣವಾಗಲಿದೆ ದೇಶದ ಮೊದಲ ಸುರಂಗ ರೈಲು ನಿಲ್ದಾಣ

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಸುಮಾರು 3 ಸಾವಿರ ಮೀಟರ್ ಎತ್ತರ ಪ್ರದೇಶದಲ್ಲಿ   ದೇಶದ ಮೊದಲ ಸುರಂಗ ರೈಲು ನಿಲ್ದಾಣ ನಿರ್ಮಾಣವಾಗಲಿದೆ ಎಂದು ಹಿರಿಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಈಗಾಗಲೇ ದೆಹಲಿ ಹಾಗೂ ಇತರೆ ನಗರಗಳಲ್ಲಿ ಹಲವು ಸುರಂಗ ಮೆಟ್ರೊ ರೈಲು ನಿಲ್ದಾಣಗಳಿವೆ. ಆದರೆ ಇದೇ ಮೊದಲ ಬಾರಿಗೆ ಬಿಲಾಸ್ಪುರ್-ಮನಾಲಿ-ಲೇಹ್ ಮಾರ್ಗದಲ್ಲಿ ಸುರಂಗ ರೈಲು ನಿಲ್ದಾಣ ನಿರ್ಮಾಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಉತ್ತರ ಮನಾಲಿಯಿಂದ 26 ಕಿ.ಮೀ. ದೂರದಲ್ಲಿರುವ ಕೆಯ್ಲೊಂಗ್ ನಲ್ಲಿ ಈ ಸುರಂಗ ರೈಲು ನಿಲ್ದಾಣ ನಿರ್ಮಾಣವಾಗುತ್ತಿದ್ದು, ಇದು ಭಾರತ-ಟಿಬೆಟ್ ಗಡಿಯಿಂದ 120 ಕಿ.ಮೀ.ದೂರದಲ್ಲಿದೆ.

ಮೊದಲ ಹಂತದ ಸ್ಥಳ ಸಮೀಕ್ಷೆ ಪ್ರಕಾರ ಕೆಯ್ಲೊಂಗ್ ನಿಲ್ದಾಣ ಸುರಂಗ ಮಾರ್ಗದಲ್ಲಿ ನಿರ್ಮಾಣವಾಗಲಿದೆ. ಇದು ದೇಶದ ಮೊದಲ ಸುರಂಗ ರೈಲು ನಿಲ್ದಾಣವಾಗಲಿದೆ ಮತ್ತು ಯೋಜನೆ ಸಂಪೂರ್ಣ ಮುಕ್ತಾಯವಾದರೆ ಈ ಮಾರ್ಗದಲ್ಲಿ ಅಂತಹ ಹಲವು ಸುರಂಗ ರೈಲು ನಿಲ್ದಾಣಗಳಿರಲಿವೆ ಎಂದು ಉತ್ತರ ರೈಲ್ವೆಯ ಮುಖ್ಯ ಎಂಜಿನಿಯರ್(ನಿರ್ಮಾಣ) ಡಿಆರ್ ಗುಪ್ತಾ ಅವರು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment