ಜೀವನ ಶೈಲಿ

ಹಿಮ್ಮಡಿಯಲ್ಲಿ ಬಿರುಕಿನ ಸಮಸ್ಯೆಯೇ ಮನೆಯಲ್ಲಿಯೇ ಮಾಡಿ ಈ ಪೆಡಿಕ್ಯೂರ್

ಪಾದಗಳಲ್ಲಿ ಬಿರುಕಿನ ಸಮಸ್ಯೆ ಕಂಡು ಬಂದರೆ ಇದರಿಂದ ಮುಕ್ತಿ ಪಡೆಯಬೇಕೆಂದರೆ ಪ್ರತಿದಿನ ಸ್ಕ್ರಬ್ಬರ್‌ನಲ್ಲಿ ತಿಕ್ಕಿ ತೊಳೆದು ಮಾಯಿಶ್ಚರೈಸರ್‌ ಹಚ್ಚಿ ಆರೈಕೆ ಮಾಡಬೇಕು. ನಂತರ ವಾರಕ್ಕೊಮ್ಮೆ ಈ ರೀತಿ ಮನೆಯಲ್ಲೇ ಪೆಡಿಕ್ಯೂರ್‌ ಮಾಡಿದರೆ ನಿಮ್ಮ ಪಾದಗಳಲ್ಲಿನ ಬಿರುಕು ಕಡಿಮೆಯಾಗಿ ಆಕರ್ಷಕವಾಗಿ ಕಾಣುವುದು.

ಮನೆಯಲ್ಲಿ ಪೆಡಿಕ್ಯೂರ್‌ ಮಾಡುವ ವಿಧಾನ, ಸೂಚನೆ : ಈ ಪೆಡಿಕ್ಯೂರ್‌ ರಾತ್ರಿ ಮಾಡಿ

1. ಪಾದಗಳನ್ನು ಪ್ಯೂಮಿಕ್‌ ಸ್ಟೋನ್‌ನಿಂದ ಚೆನ್ನಾಗಿ ತಿಕ್ಕಿ, ನಂತರ ಬ್ರಷ್‌ನಿಂದ ಉಗುರುಗಳನ್ನು ಸ್ವಚ್ಛ ಮಾಡಿ ಕಾಲುಗಳನ್ನು ತೊಳೆದು ಟವಲ್‌ನಿಂದ ಒರೆಸಿ.

2. ನಂತರ ಎಳ್ಳೆಣ್ಣೆ, ಗಂಧದ ಎಣ್ಣೆಯನ್ನು ಕಾಲಿಗೆ ಹಚ್ಚಿ ಮಸಾಜ್ ಮಾಡಿ. ಎಣ್ಣೆಯನ್ನು ಪಾದಗಳು ಚೆನ್ನಾಗಿ ಹೀರಿಕೊಳ್ಳಲಿ.

3. ಮೇಣವನ್ನು ಕರಗಿಸಿ ( paraffin wax), ಅದು ಸ್ವಲ್ಪ ತಣ್ಣಗಾದಾಗ ಪಾದಗಳಿಗೆ ಹಚ್ಚಿ. ಮೇಣ ಪಾದಗಳಲ್ಲೇ ಗಟ್ಟಿಯಾಗಲಿ. ಕಾಲುಗಳಿಗೆ ಸಾಕ್ಸ್‌ ಧರಿಸಿ ಮಲಗಿ. ಬೆಳಗ್ಗೆ ಎದ್ದ ಬಳಿಕ ಸಾಕ್ಸ್ ತೆಗೆದು, ಪಾದಗಳಲ್ಲಿರುವ ಮೇಣವನ್ನು ತೆಗೆಯಿರಿ, ನಂತರ ಕಾಲುಗಳನ್ನು ತೊಳೆದು ಮಾಯಿಶ್ಚರೈಸರ್‌ ಹಚ್ಚಿ. ಈ ರೀತಿ ವಾರಕ್ಕೊಮ್ಮೆ ಮಾಡುತ್ತಾ ಬಂದರೆ ಸಾಕು ಪಾದಗಳಲ್ಲಿ ಬಿರುಕು ಕಡಿಮೆಯಾಗಿ, ಪಾದಗಳು ನೋಡಲು ಆಕರ್ಷಕವಾಗಿರುತ್ತದೆ.

About the author

ಕನ್ನಡ ಟುಡೆ

Leave a Comment