ರಾಷ್ಟ್ರ ಸುದ್ದಿ

ಹಿರಿಯ ಗಾಂಧೀವಾದಿ ಸುರೇಂದ್ರ ಕೌಲಗಿ ಇನ್ನಿಲ್ಲ

ಬೆಂಗಳೂರು: ಹಿರಿಯ ಗಾಂಧೀವಾದಿ ಮತ್ತು ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್ ನ ಸುರೇಂದ್ರ ಕೌಲಗಿಯವರು ಭಾನುವಾರ ರಾತ್ರಿ ವಿಧಿವಶರಾಗಿದ್ದಾರೆ.

ಅವರ ನಿಧನದಿಂದ ರಾಜ್ಯ ಒಬ್ಬ ನೇರಮಾತಿನ, ಸಾಮಾಜಿಕ ಕಾಳಜಿಯ, ಸರಳ ಗಾಂಧೀವಾದಿಯನ್ನು ಕಳೆದುಕೊಂಡಿದೆ ಮತ್ತು ಮದ್ಯ ನಿಷೇಧ ಆಂದೋಲನ ಬಹುದೊಡ್ಡ ಬಲವನ್ನು ಕಳೆದುಕೊಂಡಿದೆ. ಅವರ ನೆನಪು ಮತ್ತು ಸ್ಫೂರ್ತಿಯಲ್ಲಿ ನಾವು ಮುಂದೆ ನಡೆಯಬೇಕಿದೆ ಎಂದು ಲಂಚಮುಕ್ತ ಕರ್ನಾಟಕ ವೇದಿಕೆಯ ರಾಜ್ಯ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಕನ್ನಡ ಟುಡೆ ನ್ಯೂಸ್ ಗೆ ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment