ಸುದ್ದಿ

ಹಿರಿಯ ನಟ ಆರ್.ಎನ್ ಸುದರ್ಶನ್ ಇನ್ನಿಲ್ಲ!

ಬೆಂಗಳೂರು: ಹಿರಿಯ ಬಹುಭಾಷಾ ನಟ ಆರ್.ಎನ್ ಸುದರ್ಶನ್ ಆನಾರೋಗ್ಯದಿಂದ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಬಹು ಅಂಗಾಂಗ ವೈಫಲ್ಯದಿಂದ ಬಳುತ್ತಿದ್ದ ಸುದರ್ಶನ್ ಸಾಗರ್ ಆಸ್ಪತ್ರೆಯಲ್ಲಿ ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದರು.

ಕಳೆದ ವಾರವಷ್ಟೇ ತಮ್ಮ ಮನೆಯಲ್ಲಿ ಜಾರಿಬಿದ್ದು ಬಲಗಾಲಿನ ಮೂಳೆ ಮುರಿದುಕೊಂಡಿದ್ದ ಅವರ ಆರೋಗ್ಯ ಸ್ಥಿತಿ ನಿನ್ನೆ ಸಂಜೆಯಿಂದ ಬಹಳ ಗಂಭೀರವಾಗಿತ್ತು. ಉಸಿರಾಟದ ತೊಂದರೆ ಉಲ್ಬಣಿಸಿ ಸುದರ್ಶನ್ ತೀವ್ರನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

1961ರಲ್ಲಿ ತಮ್ಮ 21 ವಯಸ್ಸಿನಲ್ಲಿ ವಿಜಯನಗರದ ವೀರಪುತ್ರ ಎಂಬ ಕನ್ನಡ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಸುದರ್ಶನ್‌ ಕಾಲಿಟ್ಟಿದ್ದರು.

ಸುಮಾರು 60 ಚಿತ್ರಗಳಲ್ಲಿ ನಾಯಕನಾಗಿ ನಟಸಿದ ಸುದರ್ಶನ್ ಬಳಿಕ ಸುಮಾರು 260 ಚಿತ್ರಗಳಲ್ಲಿ ವಿಲನ್‌ ಹಾಗೂ ಪೋಷಕ ನಟನ ಪಾತ್ರದಲ್ಲಿ ನಟಿಸಿದ್ದರು.
ಕೊನೆಯದಾಗಿ ಮಠ, ಸೂಪರ್, ಪುಂಗಿದಾಸ ಚಿತ್ರಗಳಲ್ಲಿ ನಟಿಸಿದ್ದ ಅವರು ಅಗ್ನಿಸಾಕ್ಷಿ ದಾರಾವಾಹಿಯಲ್ಲಿ ಸ್ವಾಮಿಜಿ ಪಾತ್ರದಲ್ಲಿ ಮಿಂಚಿದ್ದರು.

ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಿ ಚಿತ್ರಗಳಲ್ಲಿ ನಟಿಸಿದ್ದ ಸುದರ್ಶನ್‌ ನಿರ್ಮಾಪಕ ಮತ್ತು ಗಾಯಕರೂ ಕೂಡ ಆಗಿದ್ದರು.

About the author

ಕನ್ನಡ ಟುಡೆ

Leave a Comment