ರಾಜ್ಯ ಸುದ್ದಿ

ಹಿರಿಯ ರಂಗಕರ್ಮಿ ಮಾಲತಿ ಸಾಗರ ವಿಧಿವಶ

ಶಿವಮೊಗ್ಗ: ಹಿರಿಯ ರಂಗಕರ್ಮಿ ಮಾಲತಿ ಸಾಗರ ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಾಲತಿ ಸಾಗರ ಭಾನುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ದೆಹಲಿ ನಾಟಕಶಾಲೆಯಲ್ಲಿ ರಂಗ ಅದ್ಯಯನ ಕೈಗೊಂಡಿದ್ದ ಮಾಲತಿ ಸಾಗರ ಅವರು ಹಲವು ನಾಟಕಗಳ ರಚನೆ, ನಿರ್ದೇಶನ ಮಾಡಿದ್ದಾರೆ. ಕೆಲವಾರು ಚಲನಚಿತ್ರಗಳಲ್ಲಿ ಸಹ ಅಭಿನಯಿಸಿದ್ದಾರೆ. ರಂಗಕರ್ಮಿ ಮಾಲತಿ ಅವರ ನಿಧನಕ್ಕೆ ಸಾಗರ ಶಾಸಕ ಹರತಾಳು ಹಾಲಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

About the author

ಕನ್ನಡ ಟುಡೆ

Leave a Comment