ದೇಶ ವಿದೇಶ

ಹಿರಿಯ ಸಾಹಿತಿ ಜಂಬಣ್ಣ ಅಮರಚಿಂತ ಇನ್ನಿಲ್ಲ

ರಾಯಚೂರು: ನಾಡಿನ ಹೆಸರಾಂತ ಸಾಹಿತಿ, ಕವಿ, ಕಾದಂಬರಿಕಾರ ರಾಯಚೂರು ಜಿಲ್ಲೆಯ ಜಂಬಣ್ಣ ಅಮರಚಿಂತ ಅನಾರೋಗ್ಯದಿಂದ ಹೈದರಾಬಾದ್ ನಲ್ಲಿ ನಿಧನರಾದರು ಅವರ ಅಂತ್ಯ ಕ್ರಿಯೆ ರಾಯಚೂರಿನಲ್ಲಿ 14-2-2017 ರಂದು ಸಂಜೆ 4 ಗಂಟೆಗೆ ಜರುಗಲಿದೆಯೆಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಸಮ್ಮೇಳನಾಧ್ಯಕ್ಷ ಸ್ಥಾನ ಬೇಡವೆಂದಿದ್ದರು.
ಇತ್ತೀಚಿಗೆ ರಾಯಚೂರಿನಲ್ಲಿ 2016 ಡಿಸೆಂಬರ್ 2,3,4,ರಂದು ಜರುಗಿದ 82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಬೇಡವೆಂದು ನಯವಾಗಿ ಹೇಳಿದ್ದರು.
ಅವರೇ ಹೇಳಿದ ವಿಷಯ ಸುದ್ದಿಮೂಲ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು ಅನಾರೋಗ್ಯದ ನಿಮಿತ್ತ ತಮಗೆ ಕನ್ನಡ ಸಾಹಿತ್ಯ ಸಮ್ಮೇಳಾನಾಧ್ಯಕ್ಷರ ಸ್ಥಾನ ವಹಿಸಿಕೊಳ್ಳುವ ಆಸಕ್ತಿಯಿಲ್ಲ ಎಂದು ಹಿರಿಯ ಸಾಹಿತಿ ಜಂಬಣ್ಣ ಅಮರಚಿಂತ ಹೇಳಿದ್ದಾರೆ. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ರಾಯಚೂರಿನಲ್ಲಿ ಡಿಸೆಂಬರ್ ಮಾಹೆಯಲ್ಲಿ ಆಯೋಜಿಸಲಾಗಿ ರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಪ್ರಸ್ತಾಪವಾಗುತ್ತಿದೆ. ಆದರೆ ಅನಾರೋಗ್ಯದ ನಿಮಿತ್ತ ಸಮ್ಮೇಳನ ಅಧ್ಯಕ್ಷ ಸ್ಥಾನ ನಿಭಾಯಿಸಲು ತಮ್ಮಿಂದ ಆಗದ ಕಾರಣ ತಮ್ಮ ಹೆಸರು ಪ್ರಸ್ತಾಪ ಮಾಡದಿರುವಂತೆ ಕನ್ನಡ ಸಾಹಿತ್ಯ ಪರಿಷತ್ ಆಜೀವ ಸದಸ್ಯರು, ಸಾಹಿತ್ಯಾಸಕ್ತರು, ಹಿತೈಷಿಗಳು ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡಿದರು. ಅಭಿಮಾನಿಗಳು, ಹಿತೈಷಿಗಳು ನನ್ನನ್ನು ಭೇಟಿ ಮಾಡಿ, ದೂರವಾಣಿ ಮೂಲಕ ಸಂಪರ್ಕಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಕೋರುತ್ತಿದ್ದು, ಹಲವು ಪತ್ರಿಕೆಗಳಲ್ಲಿ ಸಹ ನನ್ನ ಹೆಸರು ಪ್ರಸ್ತಾಪಗೊಂಡಿದೆ. ಈ ರೀತಿಯ ಪ್ರೀತಿ, ವಿಶ್ವಾಸ, ಅಭಿಮಾನ ತೋರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು. ರಾಯಚೂರಿನಲ್ಲಿ ಸಮ್ಮೇಳನ ಆಯೋಜಿಸುತ್ತಿರುವುದು ಸಂತೋಷದ ವಿಚಾರ. ಸಾಹಿತಿ ಬಳಗ ತಮ್ಮ ಭಿನ್ನಾಭಿಪ್ರಾಯ ಬದಿಗೊತ್ತಿ ಸಮ್ಮೇಳನ ಯಶಸ್ವಿಗೆ ಪ್ರಯತ್ನಿಬೇಕು. ಸಾಹಿತ್ಯ ಸಮ್ಮೇಳನ ನಿರ್ವಿಘ್ನವಾಗಿ ನಡೆಯಲಿ ಎಂದು ಶುಭ ಹಾರೈಸಿದ್ದರು.

About the author

ಕನ್ನಡ ಟುಡೆ

Leave a Comment