ರಾಜಕೀಯ

ಹುಡುಕಿದರೂ ಸಿಗದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಚಿವ ಸತೀಶ್ ಅರಣ್ಯರೋದನ

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿಯಾಗಲು ಎರಡು ದಿನಗಳಿಂದ ಪ್ರಯತ್ನಿಸುತ್ತಿದ್ದೇನೆ. ಗೋಕಾಕ ನಿವಾಸಕ್ಕೆ ಗುರುವಾರ ಖುದ್ದು ಹೋದರೂ ಸಿಕ್ಕಿಲ್ಲ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ರಮೇಶ್ ಯಾವ ಕಾರಣಕ್ಕೆ ಮುನಿಸಿಕೊಂಡಿದ್ದಾರೆ ಎಂಬುದು ಗೊತ್ತಿಲ್ಲ. ಅವರು ಹಠವಾದಿ. ಹಾಗಾಗಿ ನಾನೇ ಖುದ್ದಾಗಿ ಭೇಟಿ ಮಾಡಿ ರ್ಚಚಿಸಲು ಪ್ರಯತ್ನಿಸುತ್ತಿದ್ದೇನೆ ಎಂದರು. ಸಂಪುಟ ವಿಸ್ತರಣೆ ಬಳಿಕ ಅವರು ಪಕ್ಷದ ಯಾವ ನಾಯಕರ ಸಂಪರ್ಕಕ್ಕೂ ಸಿಗುತ್ತಿಲ್ಲ. ಸ್ವತಃ ನಾನೇ ಬೆಳಗಾವಿ ಮತ್ತು ಗೋಕಾಕ ನಗರದಲ್ಲಿ ಭೇಟಿಯಾಗಲೆಂದು ಹೋದರೂ ಸಿಕ್ಕಿಲ್ಲ. ಎಲ್ಲಿ ಹೋಗಿದ್ದಾರೆ ಎಂಬುದನ್ನು ಹುಡುಕಬೇಕಾಗಿದೆ. ಸದ್ಯ ಹುಡುಕಲು ಸಮಯ ಇಲ್ಲ. ಪಕ್ಷದ ಕೆಲಸ ನಿಮಿತ್ತ ರಾಯಚೂರು ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದೇನೆ ಎಂದು ಸತೀಶ್ ಹೇಳಿದರು.

About the author

ಕನ್ನಡ ಟುಡೆ

Leave a Comment