ರಾಷ್ಟ್ರ

ಹುರಿಯತ್ ಅಧ್ಯಕ್ಷ ಸ್ಥಾನಕ್ಕೆ ಗಿಲಾನಿ ರಾಜೀನಾಮೆ

ಜಮ್ಮು ಕಾಶ್ಮೀರ: ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ತೆಹರೀಕ್ -ಇ-ಹುರಿಯತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗಿಲಾನಿ ಅವರು ಜಮ್ಮು ಮತ್ತು ಕಾಶ್ಮೀರದ ಸೋಪರ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಹುರಿಯತ್ ನ ಇನ್ನೋಬ್ಬ ಹಿರಿಯ ನಾಯಕ  ಮುಹಮ್ಮದ್ ಅಶ್ರಫ್ ಸೆಹ್ರಾಯ್ ಅವರು ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶ್ರೀನಗರದಲ್ಲಿನ ಹುರಿಯತ್ ಪಕ್ಷದ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಈ ಬದಲಾವಣೆ ಕಂಡು ಬಂದಿದೆ.

ಕಾಶ್ಮೀರ ಪ್ರತ್ಯೇಕತಾವಾದಿಗಳ ಪ್ರಮುಖ ನಾಯಕರಾಗಿರುವ ಗಿಲಾನಿ ಪ್ರತ್ಯೇಕ ಕಾಶ್ಮೀರವನ್ನು ಬೆಂಬಲಿಸುವ ಪ್ರಮುಖ ಮುಖಂಡರೆಂದು ಗುರುತಿಸಿಕೊಂಡಿದ್ದಾರೆ.ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕಾಶ್ಮೀರದಲ್ಲಿ ನಡೆಯುತ್ತಿರುವ ದೀರ್ಘ ಕಾಲದ ಉಗ್ರಗಾಮಿ ಚಟುವಟಿಕೆ ಹಾಗೂ ರಕ್ತಪಾತಕ್ಕೆ ಗಿಲಾನಿಯವರೇ ಕಾರಣ ಎಂದು ದೂರಿದ್ದಾರೆ.

 

 

About the author

ಕನ್ನಡ ಟುಡೆ

Leave a Comment