ರಾಜಕೀಯ

ಹೆಗಡೆಯವರೇ ಇನ್ನೂ ಕಾಲ ಮಿಂಚಿಲ್ಲ, ಘನ ವ್ಯಕ್ತಿಯಾಗಲು ಪ್ರಯತ್ನಿಸಿ; ದಿನೇಶ್ ಗುಂಡೂರಾವ್

ಬೆಂಗಳೂರು: ಪಕ್ಷ, ಸಿದ್ದಾಂತದ ಹೆಸರಿನಲ್ಲಿ ಒಬ್ಬರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವಂತಹದ್ದು ಅವರ ಕೀಳುಮಟ್ಟದ ಅಭಿರುಚಿಯನ್ನು ತೋರಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅನಂತ್ ಕುಮಾರ್ ಹೆಗಡೆ ಟ್ವೀಟ್ ಮೂಲಕ ತಮ್ಮ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವುದಕ್ಕೆ ಇಂದು ಟ್ವೀಟ್ ಮಾಡಿರುವ ಅವರು, ಇಷ್ಟು ಕೀಳುಮಟ್ಟಕ್ಕೆ ಅನಂತ್ ಕುಮಾರ್ ಹೆಗಡೆಯವರು ಇಳಿದು ಮಾತನಾಡುವುದು ನೋಡಿದರೆ ನಿಜಕ್ಕೂ ಅಸಹ್ಯವಾಗುತ್ತದೆ. ವೈಯಕ್ತಿಕ ವಿಷಯಗಳ ಕುರಿತು ಮಾತನಾಡುವುದು ನೋಡಿದಾಗ ಅವರ ಸಂಸ್ಕೃತಿ ಎಂಥಹದ್ದು ಎಂದು ಗೊತ್ತಾಗುತ್ತದೆ ಅವರು ಹಿಂದೂ ಸಂಸ್ಕೃತಿ, ಗ್ರಂಥಗಳ ಬಗ್ಗೆ ತಿಳಿದುಕೊಂಡಿಲ್ಲ ಎಂದು ಭಾವಿಸುತ್ತೇನೆ ಎಂದರು. ಇನ್ನೂ ಕಾಲ ಮಿಂಚಿಲ್ಲ, ಇನ್ನೂ ಅವರು ಪ್ರಯತ್ನ ಮಾಡಬಹುದು, ಒಬ್ಬ ಗಣ್ಯ ವ್ಯಕ್ತಿಯಾಗಬಹುದು ಎಂದು ಕುಟಿಕಿದ್ದಾರೆ.

About the author

ಕನ್ನಡ ಟುಡೆ

Leave a Comment