ರಾಜ್ಯ ಸುದ್ದಿ

ಹೆಡ್‌ ಮಾಸ್ಟರ್‌ ಬ್ಯಾಗಿನಲ್ಲಿ ಮದ್ಯದ ಬಾಟಲ್‌ ಇಟ್ಟು ತಾನೇ ಹಳ್ಳಕ್ಕೆ ಬಿದ್ದ ಸಹ ಶಿಕ್ಷಕ

ಹಾಸನ: ಸರ್ಕಾರಿ ಶಾಲೆಗಳ ಗುಣಮಟ್ಟ ಸರಿ ಇಲ್ಲ ಎಂದು ಖಾಸಗಿ ಶಾಲೆಗಳತ್ತ ಪೋಷಕರು ಮುಖ ಮಾಡುತ್ತಿರುವಾಗಲೇ ಹಾಸನದ ಸರ್ಕಾರಿ ಶಾಲೆಯಲ್ಲಿ ಎಣ್ಣೆ ರಾಜಕೀಯ ನಡೆದಿದೆ. ಅರಕಲಗೂಡು ತಾಲೂಕಿನ ದೊಡ್ಡಗಾನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮದ್ಯ ಸೇವಿಸದ ಮುಖ್ಯೋಪಾಧ್ಯಾಯರ ಬ್ಯಾಗಿನಲ್ಲಿ ಮದ್ಯವನ್ನು ಇಟ್ಟು ಸಿಕ್ಕಿಹಾಕಿಸಲು ಹೋಗಿ ತಾನೇ ಹಳ್ಳಕ್ಕೆ ಬಿದ್ದಿರುವ ಸಹ ಶಿಕ್ಷಕನ ಕತೆಯಿದು.

ಹೌದು, ಕುಡಿಯುವ ಅಭ್ಯಾಸವೇ ಇಲ್ಲದ ಹೆಡ್‌ ಮಾಸ್ಟರ್‌ ಬ್ಯಾಗಿನಲ್ಲಿ ಎಣ್ಣೆ ಬಾಟಲಿ ಕಂಡು ಸ್ವತಃ ಮುಖ್ಯ ಶಿಕ್ಷಕನೇ ದಂಗಾಗಿ ಹೋಗಿದ್ದರು. ಹೆಡ್​​​ ಮಾಸ್ಟರ್​​ ಬ್ಯಾಗ್‌ನ್ನು ಪರಿಶೀಲಿಸುವಂತೆ ಸಹಶಿಕ್ಷಕ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ. ಈ ವೇಳೆ ವಿದ್ಯಾರ್ಥಿಗಳಿಗೆ ಹೆಡ್‌ ಮಾಸ್ಟರ್‌ ಬ್ಯಾಗಿನಲ್ಲಿ ಬಾಟಲಿ ಸಿಕ್ಕಿದೆ.

ನಂತರ ಇದೆಲ್ಲ ಸಹ ಶಿಕ್ಷಕ ನಂಜಪ್ಪನ ಕುತಂತ್ರವೆಂದು ಮುಖ್ಯ ಶಿಕ್ಷಕ ನಾಗರಾಜ್ ಆರೋಪಿಸಿದ್ದರು. ನಂತರ ಶಾಲೆಯ ಶಿಕ್ಷಣ ಸಂಯೋಜಕ ಚಂದ್ರಶೇಖರ್​​ರಿಂದ ನಡೆದ ವಿಚಾರಣೆ ವೇಳೆ ಇದೆಲ್ಲವು ಸಹ ಶಿಕ್ಷಕನದ್ದೇ ಕುತಂತ್ರ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಹಳೆ ವೈಷಮ್ಯದಿಂದಾಗಿ ಮುಖ್ಯ ಶಿಕ್ಷಕನನ್ನು ಸಿಕ್ಕಿಹಾಕಿಸಲು ಸಹ ಶಿಕ್ಷಕನೇ ಅವರ ಬ್ಯಾಗಿನಲ್ಲಿ ಮದ್ಯದ ಬಾಟಲಿ ಇಟ್ಟಿದ್ದ ಎನ್ನುವುದು ತಿಳಿದುಬಂದಿದೆ. ನಂತರ ಮಕ್ಕಳ ಹೇಳಿಕೆ ಆಧರಿಸಿ ಶಿಕ್ಷಣ ಸಂಯೋಜಕ ಚಂದ್ರಶೇಖರ್‌ ಅವರು ಸಹ ಶಿಕ್ಷಕ ನಂಜಪ್ಪ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

About the author

ಕನ್ನಡ ಟುಡೆ

Leave a Comment