ಅಂಕಣಗಳು

ಹೆಣ್ಮಕ್ಳೇ ಹುಷಾರ್..! ಇದು ರಾಮರಾಜ್ಯವಲ್ಲ..ರಕ್ಕಸರ ರಾಜ್ಯ…!

ಹೆಣ್ಣೆಂದರೆ ಸಮಾಜದ ಕಣ್ಣು ಎಂದು ಹೇಳುವ ನಾವು ಅದೇ ಹೆಣ್ಣನ್ನು ಹಣ್ಣಿನ ರೂಪದಲ್ಲಿ ನೋಡುತ್ತಿರುವುದು ದುರದೃಷ್ಟಕರ. ಸಾವು ಬಹಳ ದೂರಿನಲ್ಲಿದ್ದಾಗ ಅದರ ಕುತ್ತಿಗೆಯನ್ನು ಹಿಚುಗಬೇಕು. ಅದೇ ನಿಟ್ಟಿನಲ್ಲಿ ಸಾವು ನಮ್ಮನೆಯ ಪಕ್ಕದಲ್ಲಿ ಬಂದಾಗ ಅದರ ವಿರುದ್ಧ ಪ್ರತಿಭಟಿಸುವುದು ಸರಿಯಲ್ಲ.
ಇಡೀ ಭಾರತ ನಿರ್ಭೀತಿಯಿಂದ ಇರಲು ಇನ್ನೂ ಎಷ್ಟು ಹೆಣ್ಣು ಮಕ್ಕಳು ಸಾವಿಗೀಡಾಗಬೇಕು. ಇಡೀಯ ಭಾರತ ಭಯ ಪಡುವಂತೆ ಮಾಡಿದ ನಿರ್ಭಯಾ ಪ್ರಕರಣ ಮುಗಿದಂತೆ , ಆರುಷಿಯ ಕೊಲೆಯಾಯಿತು. ಇಂತಹ ಸಂದರ್ಭದಲ್ಲಿ ಸಾವಿನ ಆರೋಪ ತಂದೆ ತಾಯಿಯ ಮೇಲೆ ಇದೆ ಎಂದರೆ ಎಂತಹ ಸಮಾಜದಲ್ಲಿ ನಾವಿದ್ದೇವೆ ಎಂಬುದು ನಿಜಕ್ಕೂ ಖೇದದ ಸಂಗತಿ. ಅರುಣಾ ಶಾನಭಾಗ ಪ್ರಕರಣವಂತೂ ಇಡೀಯ ಮನುಕುಲವೇ ತಲೆತಗ್ಗಿಸುವಂತದ್ದು.ಈ  ಎಲ್ಲ ಘಟನೆಗಳು ಮಾಸಿಹೋಗುವ ಮುನ್ನ ವಿಜಯಪುರದ ಬಾಲೆ ದಾನಮ್ಮಳ ಅತ್ಯಾಚಾರ ಕೊಲೆ ಇಡೀಯ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದರೆ , ದಲಿತ ಮಹಿಳೆ ಎನ್ನುವ ಕಾರಣಕ್ಕೆ ಕೆಲವು ರಾಜಕೀಯ ಪಕ್ಷಗಳು ಸಾವಿನಲ್ಲೂ ರಾಜಕಾರಣ ಮಾಡುತ್ತಿರುವುದು ನೀಚ ರಾಜಕೀಯಕ್ಕೆ ಹಿಡಿದ ನಿದರ್ಶನ. ಭಾರತಕ್ಕೆ ಮಾತೆಯ ಸ್ಥಾನ ನೀಡಿದ್ದೇವೆ, ಅದು ನಿಜ. ಆದರೆ ಅದಕ್ಕೆ ತಕ್ಕಂತೆ ನಾವಿಂದೂ ನಡೆದುಕೊಳ್ಳುತಿದ್ದೀವಾ ಎಂಬುದು ನಮ್ಮ ಮನಃಸಾಕ್ಷಿಗೆ ನಾವೇ ಪ್ರಶ್ನೆ ಮಾಡಿಕೊಳ್ಳುವ ಸಮಯ ಬಂದಿದ್ದು ಸುಳ್ಳಲ್ಲ.
ನಮ್ಮ ಮನೆಯ ಮಗಳಿಗೆ ಸ್ವಲ್ಪ ನೋವಾದರೂ ನಮ್ಮ ಮನಸು ಘಾಸಿಯಾಗುತ್ತೆ, ಅಂತಹುದರಲ್ಲಿ ಒಬ್ಬ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದರೆ ಕನ್ನಡ ನಾಡು ನಿಜಕ್ಕೂ ಮಹಿಳೆಯರಿಗೆ ಭದ್ರತಾ ವಿಷಯದಲ್ಲಿ ಸ್ವಲ್ಪ ಡೆಂಜರ್ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆ ಪಾತಕಿಗಳು ಹಲವು ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದು ಅವರನ್ನು ಇನ್ನೂ ಬಂಧಿಸದಿರುವುದೇ ನಮ್ಮ ದೇಶದ ಸಂವಿಧಾನಕ್ಕೆ ನಾವೇ ಮಾಡುವ ಅಪಮಾನ. ಈ ದೇಶಕ್ಕೆ ಹಲವಾರು ಹೆಣ್ಣು ಮಕ್ಕಳು ಮಾದರಿಯಾಗುವ ನಿಟ್ಟಿನಲ್ಲಿ ಸಾಧಿಸಿ ತೋರಿಸಿದ್ದಾರೆ. ಹೆಣ್ಣು ಸಬಲೆಯಾಗಿದ್ದಾಳೆ ಎಂದು ಮಾತಿನಲ್ಲಿ ಮಾತ್ರ ಹೇಳಲಾಗಿದೆ ಹೊರತು ವಾಸ್ತವವಾಗಿ ಅದು ನಿಜವಾಗುತ್ತಿಲ್ಲ ಎಂಬ ನೋವು ಕಾಡುತ್ತಿದೆ..
ಸಮಸ್ಯೆಗೆ ಮುಕ್ತಿ ಎಂದು : ಪದೇ ಪದೇ ಆಗುತ್ತಿರುವ ಇಂತಹ ಘಟನೆಗಳು ಸಮಾಜವನ್ನು ಭಯದಲ್ಲಿ ಇಟ್ಟಿವೆ ಎಂದರೆ ತಪ್ಪಾಗಲಾರದು. ಇಂದಿನ ಯುಗ ಬಹಳ ಮುಂದುವರೆದದ್ದು, ಅಂತೆಯೇ ಆಗಿನ ಕಾಲದ ಮಹಿಳೆಯರು ಯುದ್ಧತಂತ್ರಗಳನ್ನು ಅನುಸರಿಸಿದಂತೆ ಇಂದಿನ ಹೆಣ್ಣು ಮಕ್ಕಳು ಹೋರಾಟದ ಕಲೆಗಳನ್ನು ಕರಗತ ಮಾಡಿಕೊಳ್ಳಬೇಕಾಗಿದೆ.
ಆ ರಕ್ಕಸರನ್ನು ಯಾವ ರಾಜಕೀಯ ಪಕ್ಷಗಳೂ ಬೆಂಬಲಿಸಬಾರದು. ಕೇವಲ ೮.೫೦ ಲಕ್ಷ ಕೊಡುವುದಷ್ಟೇ ಅಲ್ಲ, ಅವರ ಮನೆಯಲ್ಲಿ ಒಬ್ಬರನ್ನು ಮೆಟ್ಟಿಗೆ ಹಚ್ಚೋ ಕೆಲಸವಾಗಬೇಕು. ಏನಾದರೂ ಆಗಲಿ ಸಂತ್ರಸ್ತ ಕುಟುಂಬ ಸಬಲವಾಗಬೇಕು. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಬೇಕು.
ರಕ್ಕಸರ ರಾಜ್ಯ ನಿರ್ನಾಮವಾಗಲಿ…
ಬುದ್ಧ ಬಸವ ಅಂಬೇಡ್ಕರರ ಕಲ್ಯಾಣದ ಹಾದಿ ನಿರ್ಮಾಣವಾಗಲಿ… ನೋವಿನೊಂದಿಗೆ ವಿದಾಯ..
                                                               – ✍ಕಿರಣ್ ಕರಲಟ್ಟಿ ಬನಹಟ್ಟಿ✍

About the author

ಕನ್ನಡ ಟುಡೆ

Leave a Comment