ರಾಷ್ಟ್ರ

ಹೆದ್ದಾರಿ ಟೋಲ್ಗೆ ಮೊಬೈಲ್ ಆ್ಯಪ್

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ಪಾವತಿಗಾಗಿ ಇನ್ನು ಹೆಚ್ಚು ಸಮಯ ವ್ಯಯಮಾಡಬೇಕಿಲ್ಲ. ಮೊಬೈಲ್ ಆ್ಯಪ್ ಮೂಲಕ  ಶುಲ್ಕ ಪಾವತಿಸುವ ಹೊಸ ವ್ಯವಸ್ಥೆ ಜಾರಿಗೆ ತರಲು ಕೇಂದ್ರಸರ್ಕಾರ ಮುಂದಾಗಿದೆ. ಇದರಿಂದ ವಾಹನ ಸವಾರರ ಅಮೂಲ್ಯ ಸಮಯ ಹಾಗೂ ಇಂಧನ ಉಳಿತಾಯವಾಗಲಿದೆ. ಬೆಂಗಳೂರು-ಚೆನ್ನೈ, ದೆಹಲಿ-ಮುಂಬೈ, ದೆಹಲಿ-ಚಂಡೀಗಢ, ದೆಹಲಿ-ಕೋಲ್ಕತ ಹೆದ್ದಾರಿಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಸಿದ್ಧತೆ ನಡೆದಿದೆ. ಮೊಬೈಲ್ ಆ್ಯಪನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸದ್ಯದಲ್ಲೇ ಬಿಡುಗಡೆ ಮಾಡಲಿದೆ.

ಬಳಕೆಹೇಗೆ:

ಆ್ಯಪ್ ಡೌನ್ಲೋಡ್ ಮಾಡಿ, ವಾಹನ ವಿವರಗಳನ್ನು ದಾಖಲಿಸಬೇಕು. ವಾಹನದ ನೋಂದಣಿಯನ್ನು ವಾಹನ್‌ನಿಂದ (ರಾಷ್ಟ್ರೀಯ ವಾಹನಗಳ ಡೇಟಾ ಬೇಸ್) ಮರುಪರಿಶೀಲಿಸಿ, ವಾಹನದ ಮಾಲೀಕತ್ವ ಮತ್ತು ನೋಂದಣಿಯನ್ನು ದೃಢೀಕರಿಸಲಾಗುತ್ತದೆ. ಆ್ಯಪ್‌ನಲ್ಲಿರುವ ಆಪ್ ನಲ್ಲಿರುವ ಪ್ರಿಪೇಯ್ಡ್ ವ್ಯಾಲೆಟ್ ಬಳಸಿ ಹಣ ಪಾವತಿಸಬೇಕು. ವಾಹನ ಟೋಲ್ ಗೇಟ್ ತಲುಪುತ್ತಲೇ ಕ್ಯು .ಆರ್. ಕೋಡ್ ಸೃಜನೆಯಾಗುತ್ತದೆ. ಟೋಲ್ ಪ್ಲಾಜಾ ತಲುಪುತ್ತಲೇ ಚಾಲಕ ಅದನ್ನು ಸ್ಕ್ಯಾನ್ಮಾಡಿ, ಮುಂದೆ ಸಾಗಬಹುದಾಗಿದೆ.

About the author

ಕನ್ನಡ ಟುಡೆ

Leave a Comment