ಸಿನಿ ಸಮಾಚಾರ

ಹೆಬ್ಬುಲಿ ಸೆರೆಗೆ ಹೊರಟ ಪೊಲೀಸರು: ಜೆಎಂಎಫ್ ಕೋರ್ಟ್​ ಬಂಧನ ವಾರಂಟ್​ ಜಾರಿಗೆ ಕ್ರಮ

ಚಿಕ್ಕಮಗಳೂರು: ನಟ ಕಿಚ್ಚ ಸುದೀಪ್​ ವಿರುದ್ಧ ಚಿಕ್ಕಮಗಳೂರಿನ ಜೆಎಂಎಫ್​ ನ್ಯಾಯಾಲಯ ಬುಧವಾರ ಬಂಧನ ವಾರಂಟ್​ ಜಾರಿ ಮಾಡಿದೆ. ವಾರಸ್ದಾರ ಧಾರಾವಾಹಿಯ ಚಿತ್ರೀಕರಣಕ್ಕಾಗಿ ಬಳಸಿಕೊಳ್ಳಲಾಗಿದ್ದ ಕಾಫಿ ತೋಟದ ಬಾಡಿಗೆಯನ್ನು ಪಾವತಿಸಿಲ್ಲ ಹಾಗೂ ತೋಟವನ್ನು ಹಾಳು ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಟ, ನಿರ್ಮಾಪಕ ಕಿಚ್ಚ ಸುದೀಪ್​ ಅವರಿಗೆ ಕೋರ್ಟ್​ ಹಲವು ಬಾರಿ ಸಮನ್ಸ್​ ನೀಡಿತ್ತು. ಆದರೆ, ಇದುವರೆಗೂ ಕೋರ್ಟ್​ಗೆ ಹಾಜರಾಗದ ಕಾರಣ ಬಂಧನ ವಾರಂಟ್​​ ಜಾರಿ ಮಾಡಿದೆ. ಹೀಗಾಗಿ ಚಿಕ್ಕಮಗಳೂರು ಪೊಲೀಸರು ಕಿಚ್ಚ ಸುದೀಪ್ ಅವರನ್ನು ಬಂಧಿಸಲು ತೆರಳಿದ್ದಾರೆ. ನಟ ಸುದೀಪ್ ವಿರುದ್ಧ ಜುಲೈ 12, 2017 ರಂದು ದೀಪಕ್ ಮಯೂರ್ ಎಂಬುವರು ದೂರು ದಾಖಲಿಸಿದ್ದರು. ಮಯೂರ್​, ಚಿಕ್ಕಮಗಳೂರು ತಾಲೂಕಿನ ಬೈಗೂರು ಗ್ರಾಮದಲ್ಲಿರುವ ಕಾಫಿ ತೋಟದ ಮಾಲೀಕ. ಚಿತ್ರೀಕರಣದ ವೇಳೆ 95 ಲಕ್ಷ ರೂ. ಮೌಲ್ಯದ ಕಾಫಿ ತೋಟವನ್ನು ಹಾಳು ಮಾಡಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಸಂಬಂಧ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

About the author

ಕನ್ನಡ ಟುಡೆ

Leave a Comment