ರಾಜ್ಯ ಸುದ್ದಿ

ಹೆಲ್ಮೆಟ್ ಹಾಕದ ಬೈಕ್ ಸವಾರನ್ನು ತಡೆದ ಟ್ರಾಫಿಕ್ ಪೊಲೀಸರನ್ನು ಅಟ್ಟಾಡಿಸಿ ಹೊಡೆದ ಸವಾರ

ದಾವರಣಗೆರೆ: ಹೆಲ್ಮೆಟ್ ಹಾಕದ ಬೈಕ್ ಸವಾರನನ್ನು ಟ್ರಾಫಿಕ್ ಪೊಲೀಸರು ತಡೆದು ನಿಲ್ಲಿಸಿದ್ದು ಇದರಿಂದ ಆಕ್ರೋಶಗೊಂಡ ಬೈಕ್ ಸವಾರ ಕುಡಿದ ಮತ್ತಿನಲ್ಲಿ ಇಬ್ಬರು ಪೊಲೀಸರನ್ನು ಅಟ್ಟಾಡಿಸಿ ಹೊಡೆದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆಯ ಹದಡಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಬೈಕ್ ಸವಾರ ರೇವಣ್ಣ ಎಂಬಾತ ನಡುರಸ್ತೆಯಲ್ಲೇ ಪಿಎಸ್ಐ ಅಂಜನಪ್ಪ ಅವರಿಗೆ ಕಲ್ಲಿನಿಂದ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾನೆ. ಕಲ್ಲಿನಿಂದ ಹೊಡೆತದಿಂದ ಪಿಎಸ್ಐ ಅವರ ಹಣೆ ಸೀಳಿ ರಕ್ತ ಬಂದಿದೆ. ಈ ಮಧ್ಯೆ ರೇವಣ್ಣ ಮತ್ತೊಬ್ಬ ಪೊಲೀಸಪ್ಪ ಸಿದ್ದೇಶ್ ರನ್ನು ಎಳೆದಾಡಿ ಹೊಡೆದಿದ್ದಾನೆ. ಪಿಎಸ್ಐ ಅಂಜನಪ್ಪ ಅವರ ಹಣೆಯಿಂದ ರಕ್ತ ಸೋರುತ್ತಿದ್ದರಿಂದ ಅಲ್ಲೇ ಇದ್ದ ಸಾರ್ವಜನಿಕರು ಅವರ ನೆರವಿಗೆ ಬಂದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

About the author

ಕನ್ನಡ ಟುಡೆ

Leave a Comment