ರಾಜ್ಯ ಸುದ್ದಿ

ಹೈಕಮಾಂಡ್​ ಅನ್ನು ಭೇಟಿ ಮಾಡಲ್ಲ, 4 ದಿನದ ಬಳಿಕ ರಾಜೀನಾಮೆ: ರಮೇಶ್ ಜಾರಕಿಹೊಳಿ

ಬೆಂಗಳೂರು: ನಾನು ಕೆ.ಸಿ.ವೇಣುಗೋಪಾಲ್​ರನ್ನು ಭೇಟಿ ಮಾಡಲ್ಲ. ಹೈಕಮಾಂಡ್​ನ್ನೂ ಭೇಟಿ ಮಾಡಲ್ಲ, ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಶಾಸಕ ರಮೇಶ್​ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯಿಂದ ಅಸಮಾಧಾನಗೊಂಡಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ 4 ದಿನ ಸಮಯಬೇಕು. ಬಳಿಕ ರಾಜೀನಾಮೆ ಕೊಡುತ್ತೇನೆ. ನನ್ನ ಜತೆ ಎಷ್ಟು ಶಾಸಕರಿದ್ದಾರೆ ಎಂದು ನಿಮಗೆ ಯಾಕೆ ಹೇಳ್ಬೇಕು? ಮುಂದಿನ ದಿನಗಳಲ್ಲಿ ಎಲ್ಲ ಬಹಿರಂಗಪಡಿಸ್ತೇನೆ ಎಂದರು.

ಸಂಪುಟ ಸಭೆಗೆ ಗೈರು ಸೇರಿ ಇತ್ತೀಚಿನ ವರ್ತನೆಗಳ ವಿಚಾರದ ಕುರಿತು ಪ್ರಶ್ನಿಸಿದಾಗ, ಇವೆಲ್ಲವುಗಳ ಅರ್ಥ ನನಗೆ ಮಂತ್ರಿ ಸ್ಥಾನದಲ್ಲಿ ಆಸಕ್ತಿ ಇಲ್ಲ ಅಂದುಕೊಳ್ಳಿ ಎಂದರು. ಕಳೆದ ಒಂದು ವಾರದಲ್ಲಿ ಮಾಧ್ಯಮಗಳು ಹೀರೋನ ವಿಲನ್ ಮಾಡಿದ್ದಾರೆ. ವಿಲನ್​ಗಳನ್ನು ಹೀರೊ ಮಾಡಿದ್ದಾರೆ. ನನ್ನ ವಿರುದ್ಧ ಸುಳ್ಳು ಸುದ್ದಿ ಪ್ರಚಾರ ಮಾಡಲಾಗುತ್ತಿದೆ ಎಂದು ಮಾಧ್ಯಮಗಳ ವಿರುದ್ಧ ಕಿಡಿ ಕಾರಿದರು.

About the author

ಕನ್ನಡ ಟುಡೆ

Leave a Comment