ಕ್ರೀಡೆ

ಹೈದರಾಬಾದ್: ಮೊದಲ ಏಕದಿನ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ

ಹೈದರಾಬಾದ್: ಬಾರತ-ಆಸ್ಟ್ರೇಲಿಯಾ ನಡುವಿನ ಎರಡು ಟಿ20 ಪಂದ್ಯದ  ನಂತರ ಏಕದಿನ ಕ್ರಿಕೆಟ್ ಸರಣಿ ಪ್ರಾರಂಬಗೊಂಡಿದ್ದು ಶನಿವಾರ ನಡೆಯುವ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ. ಟೀಂ ಇಂಡಿಯಾದಲ್ಲಿ ಕೆ.ಎಲ್. ರಾಹುಲ್ ಬದಲು ಅಂಬಟಿ ರಾಯಡು ಸ್ಥಾನ ಗಳಿಸಿದ್ದಾರೆ. ರೋಹಿತ್ ಶರ್ಮಾ, ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ರವೀಂದ್ರ ಜಡೇಜಾ, ಕೇದಾರ್ ಜಾಧವ್, ವಿಜಯ್ ಶಂಕರ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬೌಲಿಂಗ್ ವಿಭಾಗದ ಕುರಿತು ಹೇಳುವುದಾದರೆ ಚಹಾಲ್ ಅವರನ್ನು ಕೈಬಿಡಲಾಗಿದ್ದು ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಬುಮ್ರಾ ತಂಡದಲ್ಲಿದ್ದಾರೆ. ಅಸೀಸ್ ತಂಡದಲ್ಲಿ ಆಶ್ಟನ್ ಟರ್ನರ್  ಚೊಚ್ಚಲ ಏಕದಿನ ಪಂದ್ಯವನ್ನಾಡುವ ಅವಕಾಶ ಗಳಿಸಿದ್ದಾರೆ.  ಜೇ ರಿಚರ್ಡ್ಸಸನ್ ಅವರ ಬದಲು  ಅಲೆಕ್ಸ್ ಕ್ಯಾರಿ  ತಂಡಕ್ಕೆ ಆಗಮಿಸಿದ್ದಾರೆ. ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ  ಪಂದ್ಯ ಆಯೋಜನೆಯಾಗಿದೆ. ಟಿ20  ಸರಣಿ ಸೋಲುಂಡ ಟೀಂ ಇಂಡಿಯಾ ಏಕದಿನ ಸರಣಿ ಜಯಿಸಿ ಎದುರಾಳಿಗಳಿಗೆ ತಿರುಗೇಟು ನೀಡುವ ಇರಾದೆಯನ್ನು ಹೊಂದಿದೆ. ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗುವ ವಿಶ್ವಕಪ್ ಪಂದ್ಯಾವಳಿಗೆ ಸಹ ಇದು ಅಂತಿಮ ತಯಾರಿ ಎನ್ನಲಾಗಿದೆ.

About the author

ಕನ್ನಡ ಟುಡೆ

Leave a Comment