ರಾಷ್ಟ್ರ ಸುದ್ದಿ

ಹೈದ್ರಾಬಾದ್​: ಚುನಾವಣಾ ಪ್ರಚಾರ ವೇದಿಕೆ ಕುಸಿದು, ಕೆಳಗೆ ಬಿದ್ದ ನಟಿ, ರಾಜಕಾರಣಿ ವಿಜಯಶಾಂತಿ

ಹೈದ್ರಾಬಾದ್​:  ತೆಲಂಗಾಣ ಕಾಂಗ್ರೆಸ್​ ಪಕ್ಷದ ತಾರಾ ಪ್ರಚಾರಕಿ ವಿಜಯಶಾಂತಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇದಿಕೆ ಸಂಪೂರ್ಣವಾಗಿ ಕುಸಿದು ಬಿದಿದ್ದು, ಅವರು ಕೆಳಗೆ ಬಿದ್ದ ಘಟನೆ ಮೆಹಬೂಬ್​ ನಗರದ ಅಚಂಪೇಟ್​ನಲ್ಲಿ ನಡೆದಿದೆ. ವೇದಿಕೆಯಲ್ಲಿ ವಿಜಯಶಾಂತಿ ನಡೆದು ಹೋಗುವಾಗ ಈ ಘಟನೆ ನಡೆದಿದ್ದು, ವಿಜಯಶಾಂತಿ ಅವರಿಗೆ ಯಾವುದೇ ಗಾಯಗಳಾಗಿಲ್ಲ. ವೇದಿಕೆಯ ಮೇಲೆ ಕಾಂಗ್ರೆಸ್​ ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತಿತ್ತರು ನಾಯಕರಿದ್ದು,  ಅವರು ಕೂಡ ಕೆಳಗೆ ಬಿದ್ದಿದ್ದಾರೆ. ತಕ್ಷಣಕ್ಕೆ ಕಾರ್ಯಕರ್ತರು ತಮ್ಮ ಮುಖಂಡರ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ವೇದಿಕೆಯಲ್ಲಿ ಅಧಿಕ ಜನರು ಜಮಾಯಿಸಿದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ನಟಿ, ರಾಜಕಾರಣಿ ವಿಜಯಶಾಂತಿ ಚುನಾವಣಾ ಪ್ರಚಾರ ನಡೆಸುತ್ತಿರುವ ಹಿನ್ನಲೆಯಲ್ಲಿ ಅವರ ಪ್ರಚಾರಕ್ಕೆ ಜನಸಾಗರವೇ ಹರಿದುಬರುತ್ತಿದೆ.

About the author

ಕನ್ನಡ ಟುಡೆ

Leave a Comment