ರಾಜ್ಯ ಸುದ್ದಿ

ಹೊಸೂರು ಗೋಸಂದ್ರ ಬಳಿ ಭೀಕರ ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು

ಆನೇಕಲ್​: ಕಾರು ಹಾಗೂ ಲಾರಿ ನಡುವಿನ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡ ಘಟನೆ ತಮಿಳುನಾಡಿನ ಹೊಸೂರು ಗೋಸಂದ್ರ ಬಳಿ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಡೆದಿದೆ.

ಮೇರಿ (65), ತಾರೀನಾ (45), ಏಂಜಲ್​(18), ಅನಿತಾ(18) ಮೃತಪಟ್ಟಿದ್ದಾರೆ. ಗಾಯಾಳುಗಳು ಹಾಗೂ ಮೃತದೇಹಗಳನ್ನು ಸ್ಥಳೀಯರ ನೆರವಿನಿಂದ ಶೂಲಗಿರಿ ಠಾಣೆ ಪೊಲೀಸರು ಹೊಸೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಬೆಂಗಳೂರಿನಿಂದ ತಮಿಳುನಾಡಿನ ನಾಗಮಂಗಲದ ಚರ್ಚ್​ಗೆ ತೆರಳಿದ್ದರು. ಕೃಷ್ಣಗಿರಿಯಿಂದ ವಾಪಸ್​ ಬರುವಾಗ ರಸ್ತೆ ಸರಿಯಾಗಿ ತಿಳಿಯದೆ ಅಡ್ರೆಸ್​ ಕೇಳಲು ಕಾರು ನಿಲ್ಲಿಸಿದ್ದರು. ಈ ವೇಳೆ ಬಂದ ಟಿಪ್ಪರ್​ ಡಿಕ್ಕಿ ಹೊಡೆದಿದೆ.

About the author

ಕನ್ನಡ ಟುಡೆ

Leave a Comment