ರಾಜ್ಯ ಸುದ್ದಿ

ಹೊಸ ವರ್ಷಾಚರಣೆಗಾಗಿ ಸಿಂಗಾಪುರಕ್ಕೆ ತೆರಳಿದ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ: ಬಿಜೆಪಿ ಟೀಕೆ

ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಸಿಂಗಾಪುರ ಪ್ರವಾಸಕ್ಕೆ ತೆರಳಿದ್ದಾರೆ. ಸಿಎಂ ಪ್ರವಾಸವನ್ನು ಬಿಜೆಪಿ ಟೀಕಿಸಿದೆ. ಕುಮಾರಸ್ವಾಮಿ ಅವರು ಶುಕ್ರವಾರ ತಡರಾತ್ರಿ ಸಿಂಗಾಪುರಕ್ಕೆ ತೆರಳಿದ್ದು, ಮುಂದಿನ ವರ್ಷ ಜನವರಿ 2 ರಂದು ವಾಪಸಾಗಲಿದ್ದಾರೆ.

ಬಿಜೆಪಿ ಕಟು ಟ್ವೀಟ್

ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದ ಬಳಿಕ 377 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 156 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ರೈತರ ಸಾಲಮನ್ನಾ ಭರವಸೆಯನ್ನು ಈಡೇರಿಸಿಲ್ಲ. ರಾಜ್ಯ ಸಾಲದಲ್ಲಿ ಮುಳುಗಿದೆ. ಆದರೆ, ಮಣ್ಣಿನ ಮಗ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು ಹೊಸ ವರ್ಷಾಚರಣೆಗಾಗಿ ಸಿಂಗಾಪುರಕ್ಕೆ ಪ್ರವಾಸಕ್ಕೆ ತೆರಳಿದ್ದಾರೆ ಎಂದು ಬಿಜೆಪಿ ಟ್ವೀಟ್​ ಮಾಡಿ ಟೀಕಿಸಿದೆ.

About the author

ಕನ್ನಡ ಟುಡೆ

Leave a Comment