ರಾಜ್ಯ ಸುದ್ದಿ

ಹೊಸ ವರ್ಷಾಚರಣೆ ವೇಳೆ ಪಟಾಕಿ ನಿಷೇಧಿಸಿ: ಹಿಂದೂ ಜನಜಾಗೃತಿ ಸಮಿತಿ ಆಗ್ರಹ

ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿಸುವುದನ್ನು ನಿಷೇಧಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ. ನಗರದ ಪುರಭವನದ ಆವರಣದಲ್ಲಿ ನಡೆಸಲಾದ ಧರಣಿ ವೇಳೆ ಮಾತನಾಡಿದ ಹಿಂದೂ ಜನಜಾಗೃತಿ ಸಂಚಾಲಕ ಮೋಹನ್ ಗೊಡ ಅವರು, ದೀಪಾವಳಿ ಹಬ್ಬದಂತು ಪಟಾಕಿ ಸಿಡಿಸುವುದಕ್ಕೆ ಸಮಯವನ್ನು ನಿಗದಿ ಮಾಡಲಾಗಿತ್ತು. ಇದೇ ರೀತಿಯಲ್ಲಿಯ ಹೊಸ ವರ್ಷಾಚರಣೆ ವೇಳೆಯೂ ಪಟಾಕಿ ಸಿಡಿಸುವುದಕ್ಕೆ ಸಮಯವನ್ನು ನಿಗದಿ ಮಾಡಬೇಕೆಂದು ಹೇಳಿದ್ದಾರೆ. ಇದೇ ವೇಳೆ ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿ ಮೇಲೆ ನಿಷೇಧ ಹೇರುವಂತೆ ಕೇಳಿ ಬರುತ್ತಿರುವ ಆಗ್ರಹ ಹಾಗೂ ಆರೋಪಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.
ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಹಾಗೂ ಹಿಂದೂಪರ ಸಂಘಟನೆಗಳನ್ನು ಮುಕ್ತಾಯಗೊಳಿಸಲು ಪಿತೂರಿಗಳು ನಡೆಯುತ್ತಿವೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಈ ರೀತಿಯ ಯತ್ನಗಳು ಸಾಕಷ್ಟು ನಡೆಸಿದ್ದವು. ಆದರೆ, ಅದಾವುದೂ ಯಶಸ್ವಿಯಾಗಲಿಲ್ಲ. ಇದೀಗ ಮತ್ತೆ ಅದೇ ರೀತಿಯ ಯತ್ನಗಳು ಮತ್ತೆ ನಡೆಯುತ್ತಿವೆ ಎಂದಿದ್ದಾರೆ.

About the author

ಕನ್ನಡ ಟುಡೆ

Leave a Comment