ಸಿನಿ ಸಮಾಚಾರ

ಹೌದಪ್ಪ, ನನಗೆ ಬಾಡಿಗೆ ಕಟ್ಟೋ ಯೋಗ್ಯತೆಯಿಲ್ಲ: ನಿಖಿಲ್ ಗೆ ಯಶ್ ತಿರುಗೇಟು

ಮಂಡ್ಯ: ಮಂಡ್ಯ ಲೋಕಸಭೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ವಯಕ್ತಿಕ ನಿಂದನೆ ತಾರಕಕ್ಕೇರಿದೆ, ಮನೆ ಬಾಡಿಗೆ ಕಟ್ಟಲು ಯೋಗ್ಯತೆ  ಇಲ್ಲದವರು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂಬ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ್ ನಟ ಯಶ್ ತಿರುಗೇಟು ನೀಡಿದ್ದಾರೆ. ಉಮ್ಮಡಹಳ್ಳಿಯಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಪ್ರಚಾರದಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ ನಿಖಿಲ್ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು,
ಹೌದಪ್ಪ, ನನಗೆ ಮನೆ ಬಾಡಿಗೆ ಕಟ್ಟೋ ಯೋಗ್ಯತೆ ಇಲ್ಲ, ಆದರೆ ಕೊಪ್ಪಳ ಜನತೆಗೆ ಏನು ಮಾಡಿದ್ದೇನೆ ಎಂಬುದನ್ನು ಕೇಳಿ ನೋಡಿ ಎಂದು ಹೇಳಿದ್ದಾರೆ, ಕೇವಲ ಮಂಡ್ಯದಲ್ಲಿ ಮಾತ್ರ ರೈತರಿಲ್ಲ, ರಾಜ್ಯದ ಇತರ ಭಾಗದಲ್ಲೂ ರೈತರಿದ್ದಾರೆ, ಅಲ್ಲಿ ನೀರಿನ ಸಮಸ್ಯೆ ತಾಂಡವವಾಡುತ್ತಿದೆ, ಮನೆ ಬಾಡಿಗೆ ಕಟ್ಟುವ ಹಣವನ್ನು ತೆಗೆದುಕೊಂಡು ಹೋಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ನಾವು ಬರಿ ಬಾಯಲ್ಲಿ ಮಾತನಾಡುವವರಲ್ಲ, ನಾನು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಅಲ್ಲಿನ ಜನರಿಗೆ ಸಹಾಯ ಮಾಡಿದ್ದೇನೆ ಹೊರತು ಜನರ ತೆರಿಗೆ ಹಣದಿಂದ ನಾನು ಸಹಾಯ ಮಾಡಿಲ್ಲ ಎಂದು ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

About the author

ಕನ್ನಡ ಟುಡೆ

Leave a Comment