ರಾಜಕೀಯ

1 ಸಾವಿರ ಕೋಟಿ ಆಸ್ತಿಯ ಒಡೆಯ ಎಂಟಿಬಿ ನಾಗರಾಜ್ ದೇಶದ ಶ್ರೀಮಂತ ಶಾಸಕ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶಾಸಕ ಎಂಟಿಬಿ ನಾಗರಾಜ್  ಓದಿರುವುದು ಕೇವಲ 8 ನೇ ತರಗತಿ. ಆದರೆ. ಅವರು  1. 015 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದು, ಸಂಪುಟದಲ್ಲಿನ ಅತಿ ಶ್ರೀಮಂತ ಶಾಸಕರಾಗಿದ್ದಾರೆ. ಎಡಿಆರ್ ಸಂಸ್ಥೆ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ  ಹೊಸಕೋಟೆ ಶಾಸಕ ಹಾಗೂ ಕುರುಬ ಸಮುದಾಯದ ನಾಯಕರಾಗಿರುವ ಎಂಟಿಬಿ ನಾಗರಾಜ್ ದೇಶದಲ್ಲಿಯೇ ಶ್ರೀಮಂತ ಶಾಸಕ ಎಂಬುದು ತಿಳಿದುಬಂದಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿರುವ ಎಂಟಿಬಿ ನಾಗರಾಜ್ ಅವರಿಗೆ ಜಲ ಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಅವರ ಬೆಂಬಲವೂ ದೊರೆತಿದ್ದು, ಇದೀಗ ಸಂಪುಟದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ  ಯಶಸ್ವಿಯಾಗಿದ್ದಾರೆ.ಎಂಟಿಬಿ ನಾಗರಾಜ್ ಅವರ ಚುನಾವಣಾ ಅಫಿಡವಿಟ್ ನಂತೆ, ಕೃಷಿ, ವಾಣಿಜ್ಯ , ಮತ್ತಿತರ ವ್ಯವಹಾರಗಳ ಮೌಲ್ಯ 1.015 ಕೋಟಿ ರೂ. ಆಗಿದೆ. 2016-17ರಲ್ಲಿ ಸುಮಾರು 104 ಕೋಟಿ ರೂ. ಆದಾಯ ತೆರಿಗೆ ಪಾವತಿಸಿದ್ದಾರೆ. ಅವರ ಅವಲಂಬಿತರ ಆದಾಯ ಸೇರಿದ್ದರೆ ವರ್ಷಕ್ಕೆ 157 ಕೋಟಿ ರೂ. ಆದಾಯ ಗಳಿಸುತ್ತಿದ್ದಾರೆ.ಕೇವಲ 8 ನೇ ತರಗತಿ ಪಾಸ್ ಮಾಡಿರುವ ಎಂಟಿಬಿ ನಾಗರಾಜ್   437 ಕೋಟಿ ಮೌಲ್ಯದ ಚಿರ ಹಾಗೂ 578 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿ ಹೊಂದಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಆರ್ಥಿಕ ನೆರವು ನೀಡುವ ಬೆನ್ನೆಲೆಬು ಎಂದು ನಿರೀಕ್ಷಿಸಲಾಗಿದೆ.

About the author

ಕನ್ನಡ ಟುಡೆ

Leave a Comment