ಕ್ರೀಡೆ ದೇಶ ವಿದೇಶ

11ನೇ ಬಾರಿ ಮಾಂಟೆ ಕಾರ್ಲೊ ಮಾಸ್ಟರ್ ಟೆನಿಸ್‌ ಗೆದ್ದುಕೊಂಡಿರುವ ನಡಾಲ್‌.

ಮಾಂಟೆ ಕಾರ್ಲೊ: ಜಪಾನಿನ ಕೆಯಿ ನಿಶಿಕೋರಿ ಅವರನ್ನು ಸುಲಭವಾಗಿ ಮಣಿಸಿದ ಸ್ಪೇನ್‌ನ ರಫೆಲ್‌ ನಡಾಲ್‌ ಅವರು 11ನೇ ಬಾರಿ ಮಾಂಟೆ ಕಾರ್ಲೊ ಮಾಸ್ಟರ್ ಟೆನಿಸ್‌ ಕೂಟದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ರವಿವಾರ ನಡೆದ ಫೈನಲ್‌ ಹೋರಾಟದಲ್ಲಿ ನಡಾಲ್‌ ಅವರು 6-3, 6-2 ಸೆಟ್‌ಗಳಿಂದ ನಿಶಿಕೋರಿ ಅವರನ್ನು ಕೆಡಹಿದರು. ಈ ಮೂಲಕ ವಿಶ್ವದ ನಂಬರ್‌ ವನ್‌ ಸ್ಥಾನವನ್ನು ತನ್ನಲ್ಲಿ ಉಳಿಸಿಕೊಂಡರು. ಎಟಿಪಿ ಟೂರ್‌ನಲ್ಲಿ 76ನೇ ಪ್ರಶಸ್ತಿ ಗೆದ್ದಿರುವ ನಡಾಲ್‌ 11 ಬಾರಿ ಮಾಂಟೆ ಕಾರ್ಲೊ ಪ್ರಶಸ್ತಿ ಗೆದ್ದ ಮೊದಲ ಟೆನಿಸ್‌ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. ಇದು ನಡಾಲ್‌ ಅವರ 31ನೇ ಮಾಸ್ಟರ್ ಪ್ರಶಸ್ತಿ ಕೂಡ ಆಗಿದೆ.ಆವೇ ಅಂಗಣದಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದ 16 ಬಾರಿಯ ಗ್ರ್ಯಾನ್‌ ಸ್ಲಾಮ್‌ ವಿಜೇತ ಮುಂದಿನ ವಾರ ಇನ್ನೊಂದು ದಾಖಲೆ ಮಾಡುವ ಗುರಿ ಇಟ್ಟುಕೊಂಡಿದ್ದಾರೆ. ಮುಂದಿನ ವಾರ ಬಾರ್ಸಲೋನಾ ಓಪನ್‌ ಆರಂಭವಾಗಲಿದ್ದು 11ನೇ ಪ್ರಶಸ್ತಿ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

 

About the author

ಕನ್ನಡ ಟುಡೆ

Leave a Comment