ದೇಶ ವಿದೇಶ ಸುದ್ದಿ

117 ವರ್ಷ ವಯಸ್ಸಿನ ನಬಿ ತಮೀಜಾ ನಿಧನ

ಜಗತ್ತಿನ ಅತಂತ್ಯ ಹಿರಿಯ ಮಹಿಳೆ ಖ್ಯಾತಿಯ ಜಪಾನ್‌ನ ನಬಿ ತಮೀಜಾ ಇನ್ನಿಲ್ಲ. 117 ವರ್ಷ ವಯಸ್ಸಿನ ನಬಿ ತಮೀಜಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಜಪಾನ್‌ನ ಕಗೋಶಿಮಾ ನಿವಾಸಿ ನಬಿ ತಮೀಜಾ ವಯೋವೃದ್ಧ ಖಾಯಿಲೆಯಿಂದ ಬಳಲುತ್ತಿದ್ದರು. ಜನವರಿಯಿಂದಲೂ ಆಸ್ಪತ್ರೆಯಲ್ಲಿದ್ದ ಅವರು ಶನಿವಾರ ಸಂಜೆ ಕೊನೆಯುಸಿರೆಳೆದಿದ್ದಾರೆ ಎಂದು ಮಾಧ್ಯಮಗಳ ವರದಿ ಹೇಳಿದೆ. 1900ರಲ್ಲಿ ಜನಿಸಿದ್ದ ನಬಿ ತಮೀಜಾ ಅವರನ್ನು ಜಗತ್ತಿನ ಅತಿ ಹಿರಿಯರೆಂದು ಭಾವಿಸಲಾಗಿತ್ತು. 2017ರ ಸೆಪ್ಟೆಂಬರ್‌‌ನಲ್ಲಿ ಜಮೈಕಾದ 117 ವರ್ಷದ ವೋಲೆಟ್‌ ಬ್ರೌನ್‌ ನಿಧನರಾಗಿದ್ದರು. ಇವರ ಬಳಿಕ ನಬಿ ತಮೀಜಾ ಅವರೇ ಜಗತ್ತಿನ ಹಿರಿಯ ಜೀವ ಎನ್ನಲಾಗಿತ್ತು. ವೋಲೆಟ್‌ ಬ್ರೌನ್‌ ನಿಧನದ ವೇಳೆ ಗಿನ್ನಿಸ್‌ ವರ್ಲ್ಡ್‌‌ ರೆಕಾರ್ಡ್‌ ನಡೆಸಿದ ಸರ್ವೆಯಲ್ಲೂ ನಬಿ ತಮೀಜಾ ಅವರನ್ನು ಪ್ರಪಂಚದ ಹಿರಿಯ ವ್ಯಕ್ತಿ ಎಂದು ಗುರುತಿಸಲಾಗಿತ್ತು.

About the author

ಕನ್ನಡ ಟುಡೆ

Leave a Comment