ರಾಜ್ಯ ಸುದ್ದಿ

12 ಐಎಎಸ್ ಅಧಿಕಾರಿಗಳ ವರ್ಗಾವಣೆ, ಶಿಕ್ಷಣ ಇಲಾಖೆಗೆ ನೂತನ ಕಾರ್ಯದರ್ಶಿ

ಬೆಂಗಳೂರು: 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಶಿಕ್ಷಣ ಇಲಾಖೆಗೆ ನೂತನ ಕಾರ್ಯದರ್ಶಿಯನ್ನು ನೇಮಕ ಮಾಡಲಾಗಿದೆ.
ಈ ವರೆಗೂ ಶಾಲಿನಿ ರಜನೀಶ್ ಅವರು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವರೆಗೂ ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಸ್ ಆರ್ ಉಮಾಶಂಕರ್ ಅವರನ್ನು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಸಾರ್ವಜನಿಕ ಸೂಚನೆಗಳ ವಿಭಾಗದ ಆಯುಕ್ತ ಪಿಸಿ ಜಾಫರ್ ಅವರಿಗೆ ಹೆಚ್ಚುವರಿಯಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಜವಾಬ್ದಾರಿ ನೀಡಲಾಗಿದ್ದರೆ, ವಿ ಮಂಜುಳ ಅವರನ್ನು ಡಿಪಿಎಆರ್ ನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ, ಜಿ ಕುಮಾರ್ ನಾಯ್ಕ್ ಅವರನ್ನು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ, ಕರ್ನಾಟಕ ವಿದ್ಯುತ್ ನಿಗಮದ ಎಂಡಿ ಹುದ್ದೆಗೆ ವಿ ಪೊನ್ನುರಾಜ್ ಅವರನ್ನು ವರ್ಗಾವಣೆ ಮಾಡಲಾಗಿದೆ.

About the author

ಕನ್ನಡ ಟುಡೆ

Leave a Comment